Advertisement

ಕಲ್ಪತರು ನಾಡಿನ ಜನರಲ್ಲಿ ಮೂಡುತ್ತಿದೆ ಪರಿಸರ ಜಾಗೃತಿ

09:15 PM Jun 07, 2021 | Team Udayavani |

ತುಮಕೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ,ಕಾಡು ಬೆಳಸಿ ನಾಡು ಉಳಿಸಿ ಎನ್ನುವ ಘೋಷಣೆಗಳನ್ನು ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಯಲ್ಲಿಕೇಳುತ್ತೇವೆ. ಸರ್ಕಾರ ಪರಿಸರ ರಕ್ಷಣೆಗೆ ಒತ್ತು ನೀಡುತ್ತಿದೆ. ಆದರೆ, ಕೆಲವು ಅರಣ್ಯ ಭಕ್ಷಕರು ಪರಿಸರ ರಕ್ಷಣೆಯಅರಿವಿಲ್ಲದೇ ಮರಗಳ ರಕ್ಷಣೆ ಮಾಡುವುದು ಬಿಟ್ಟುಅರಣ್ಯ ನಾಶ ಮಾಡುತ್ತಾರೆ.

Advertisement

ಕಲ್ಪತರು ನಾಡಿನಲ್ಲಿ ಈಗಅರಣ್ಯ ಪ್ರದೇಶ ಹೆಚ್ಚಳ ಆಗಿರುವುದು ಅರಣ್ಯಇಲಾಖೆ ನಡೆಸಿರುವ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.ಇಂದು ಪರಿಸರ ಅಸಮತೋಲನದಿಂದ ಋತುಗಳು ಬದಲಾಗುತ್ತಿವೆ. ಕಾಲಕಾಲಕ್ಕೆ ಮಳೆ ಆಗುತ್ತಿಲ್ಲ.ಬೆಳೆ ಬರುತ್ತಿಲ್ಲ. ಭೂಮಿಯ ಮೇಲೆ ಉಷ್ಣಾಂಶಹೆಚ್ಚುತ್ತಿದೆ, ಅಂತರ್ಜಲ ಕುಸಿಯುತ್ತಿದೆ.

ಇದರಿಂದಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿಅರಣ್ಯ ಸಂಪತ್ತಿನ ಜತೆಗೆ ಅರಣ್ಯವನ್ನೇ ನಂಬಿರುವಪ್ರಾಣಿ, ಪಕ್ಷಿಗಳು ನಾಶವಾಗುತ್ತಿವೆ. ಎಲ್ಲ ಕಡೆ ಅರಣ್ಯಸಂಪತ್ತು ನಾಶವಾಗುತ್ತಿರುವ ಸಂದರ್ಭದಲ್ಲಿರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಹೆಚ್ಚಳಆಗಿದೆ. ಎಲ್ಲ ಕಡೆ ಹಸಿರು ಕಾಣುತ್ತಿದೆ. ಅರಣ್ಯದಲ್ಲಿ ಮರಗಳಮಾರಣ ಹೋಮ ಕಡಿಮೆಯಾಗಿದೆ. ಮರ ಗಿಡಗಳನ್ನುಬೆಳಸಿ, ಪರಿಸರ ಸಂರಕ್ಷಿಸುವಅರಿವು ಜನರಲ್ಲಿ ಹೆಚ್ಚುತ್ತಿದೆ.

ಪ್ರಾಣಿಗಳ ಸಂತತಿ ಹೆಚ್ಚುತ್ತಿದೆ:ರಾಜ್ಯ ಅರಣ್ಯ ಇಲಾಖೆ ನಡೆಸಿರುವ ಸೆಟಲೈಟ್‌ ಸಮೀಕ್ಷೆಯಲ್ಲಿತುಮಕೂರು ಜಿಲ್ಲೆಯಲ್ಲಿ 30 ಸಾವಿರಹೆಕ್ಟೇರ್‌ ಅರಣ್ಯ ಪ್ರದೇಶ ಹೆಚ್ಚಳ ಆಗಿರು ವುದುಕಂಡುಬಂದಿದೆ. ಜಿಲ್ಲೆಯಲ್ಲಿ ಈಗ ಇರುವ ಅರಣ್ಯಪ್ರದೇಶದ ಅಂಕಿ-ಅಂಶ ಗಮನಿಸುವುದಾದರೆಮೀಸಲು ಅರಣ್ಯ 80,712.19 ಹೆಕ್ಟೇರ್‌, ಗ್ರಾಮಅರಣ್ಯ 2902.94, ರಕ್ಷಿತ ಅರಣ್ಯ 4024, ಸೆಕ್ಷನ್‌-4,ಅರಣ್ಯ 13033.07, ಡೀಮ್ಡ್ ಫಾರೆಸ್ಟ್‌ 13,388.64,ಒಟ್ಟು 1,14,060.84 ಹೆಕ್ಟೇರ್‌ ಪ್ರದೇಶದಲ್ಲಿಅರಣ್ಯ ಸಂಪತ್ತು ಇದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿಹಸಿರು ಕಂಗೊಳಿಸುತ್ತಿದೆ. ಎಲ್ಲಕಡೆ ಅರಣ್ಯ ಪ್ರದೇಶ ದಲ್ಲಿಮರ ಗಿಡಗಳು ದಟ್ಟವಾಗಿಬೆಳೆದಿರುವುದ ರಿಂದಅರಣ್ಯ ಪ್ರಾಣಿಗಳ ಸಂತತಿಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಚಿರತೆ, ಕರಡಿ, ಜಿಂಕೆ, ನವಿಲುಸೇರಿದಂತೆ ಅನೇಕ ಕಾಡುಪ್ರಾಣಿಗಳು ತಮ್ಮ ಸಂತತಿಯನ್ನುಹೆಚ್ಚಿಸಿಕೊಂಡಿವೆ.

ಅರಣ್ಯ ಕೃಷಿಗೆ ಹೆಚ್ಚು ಆಸಕ್ತಿ: ಈಗ ಅರಣ್ಯ ಪ್ರದೇಶತನ್ನ ವಿಸ್ತೀರ್ಣ ಹೆಚ್ಚಿಸಿಕೊಳ್ಳಲು ಅರಣ್ಯದಿಂದ ಮನೆಗಳಿಗೆ ಸೌದೆ ತರುವುದು ನಿಂತಿದೆ. ಸರ್ಕಾರ ಹಳ್ಳಿಹಳ್ಳಿಗೆಗ್ಯಾಸ್‌ ನೀಡಿರುವುದರಿಂದ ಅಡುಗೆ ಮಾಡಲು ಗ್ಯಾಸ್‌ಬಳಸುತ್ತಿದ್ದಾರೆ. ಅರಣ್ಯ ರಕ್ಷಕರು ಅರಣ್ಯದಲ್ಲಿ ಮರಕಡಿಯದಂತೆ ಗಮನ ಹರಿಸುತ್ತಿದ್ದಾರೆ. ಜೊತೆಗೆ ರೈತರುಅರಣ್ಯ ಕೃಷಿ ಮಾಡಲು ಹೆಚ್ಚು ಆಸಕ್ತಿ ತೋರುತ್ತಿರುವುದು ಮತ್ತು ಜನರಲ್ಲಿಯೇ ಮರ ಬೆಳೆಸಬೇಕುಎನ್ನುವ ಆಸಕ್ತಿ ಮೂಡುತ್ತಿರುವುದು ಅರಣ್ಯ ಹೆಚ್ಚಲುಪ್ರಮುಖ ಕಾರಣವಾಗಿದೆ.ಒಟ್ಟಾರೆ ಪ್ರತಿ ವರ್ಷ ವಿಶ್ವ ಪರಿಸರ ದಿನದಂದುಅರಣ್ಯ ಬೆಳಸುವುದರ ಬಗ್ಗೆ ಜಾಗೃತಿ ಕಾರ್ಯಕ್ರಮಗಳುನಡೆಯುತ್ತವೆ. ಜನ ಇದನ್ನು ಅರಿತು ಮುಂದೆ ಉತ್ತಮಪರಿಸರ ನಿರ್ಮಾಣವಾಗಲು ಪ್ರತಿಯೊಬ್ಬರು ಕನಿಷ್ಟಒಂದು ಮರ ಬೆಳೆಸಿ ಪರಿಸರ ಉಳಿಸಿ ಎನ್ನುವುದೇ”ಉದಯವಾಣಿ’ ಕಾಳಜಿಯಾಗಿದೆ.

Advertisement

ಚಿ.ನಿ.ಪುರುಷೋತ್ತಮ್

Advertisement

Udayavani is now on Telegram. Click here to join our channel and stay updated with the latest news.

Next