Advertisement

ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್‌ ಬಂಧನ

01:43 AM Apr 07, 2024 | Team Udayavani |

ಆ್ಯಮ್‌ಸ್ಟರ್‌ಡಮ್‌: ನೆದರ್‌ಲೆಂಡ್‌ನ‌ ಹೇಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪರಿಸರ ಹೋರಾಗಾರ್ತಿ ಗ್ರೆಟಾ ಥನ್ಬರ್ಗ್‌ ಅವರನ್ನು ಶನಿವಾರ ಡಚ್‌ ಪೊಲೀಸರು ಬಂಧಿಸಿದ್ದಾರೆ. ನೆದರ್‌ಲ್ಯಾಂಡ್‌ ಸರಕಾ ರವು ಇಂಧನ ಮತ್ತು ಪಳಯುಳಿಕೆ ಕೈಗಾರಿಕೆಗಳಿಗೆ ಸಬ್ಸಿಡಿ ಘೋಷಿಸಿ ರುವುದು ಹಾಗೂ ತೆರಿಗೆ ವಿನಾಯಿತಿ ನೀಡಿರುವುದನ್ನು ಖಂಡಿಸಿ ಗ್ರೆಟಾ ನೇತೃತ್ವದಲ್ಲಿ ಪರಿಸರವಾದಿಗಳ ತಂಡವು ರಸ್ತೆ ತಡೆ ನಡೆಸಿತ್ತು. ಮುಖ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದಿದ್ದರಿಂದ ಮತ್ತೂಂದು ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next