Advertisement

ವೈದ್ಯರಿಂದ ಪರಿಸರ ಜಾಗೃತಿ ಜಾಥಾ

03:56 PM Jun 17, 2019 | Team Udayavani |

ಸಕಲೇಶಪುರ: ಮಲೆನಾಡಿನಲ್ಲಿ ವಿವಿಧ ಯೋಜನೆ ಗಳಿಂದ ನಾಶವಾಗುತ್ತಿರುವ ಅರಣ್ಯ, ಗುಡ್ಡ, ಬೆಟ್ಟ, ನದಿ, ಹಳ್ಳ, ಝರಿ, ಜಲಪಾತಗಳ ಪರಿಸರ ಸಂರಕ್ಷಣೆಗಾಗಿ ಜಿಲ್ಲೆಯ 150ಕ್ಕೂ ಹೆಚ್ಚು ವೈದ್ಯರು ಹಾಗೂ ಪರಿಸರ ಪ್ರೇಮಿಗಳಿಂದ ಭಾನುವಾರ ಸಕಲೇಶಪುರದಲ್ಲಿ ಬೃಹತ್‌ ಜನ ಜಾಗೃತಿ ಜಾಥಾ ನಡೆಸಲಾಯಿತು.

Advertisement

ಪರಿಸರ ಸಂರಕ್ಷಣೆ ವ್ಯಂಗ್ಯ ಚಿತ್ರ ಪ್ರದರ್ಶನ: ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಥಾ ಮಾಡಿದ ನಂತರ ಕ್ರಾಫ‌ರ್ಡ್‌ ಆಸ್ಪತ್ರೆ ಆವರಣದಲ್ಲಿ ಹಲವು ಸಸಿಗಳನ್ನು ನೆಡಲಾಯಿತು. ನಂತರ ರೋಟರಿ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪರಿಸರ ಸಂರಕ್ಷಣೆ ಕುರಿತು ವ್ಯಂಗ ಚಿತ್ರಕಾರ ಶಿವರಾಮ್‌ ಅವರ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಮತ್ತೂಬ್ಬ ಚಿತ್ರಕಾರ ಶರದ್‌ ಕುಲಕರ್ಣಿಯವರ ಪರಿಸರ ಸಂರಕ್ಷಣೆ ಕುರಿತ ಚಿತ್ರಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಡಾ.ಅನೂಪ್‌ ಜನಾದ‌ರ್ನ್‌ ಮಾತನಾಡಿ, ಪಶ್ಚಿಮಘಟ್ಟದ ರಕ್ಷಿತ ಅರಣ್ಯ ಗುಡ್ಡ, ಬೆಟ್ಟಗಳು ಕೆಲವು ಯೋಜನೆಗಳಿಂದ ಹಂತ ಹಂತವಾಗಿ ನಾಶವಾಗುತ್ತಿವೆ. ಇದರಿಂದ ಒಂದೆಡೆ ಮರಗಳು ನಾಶವಾದರೆ ಮತ್ತೂಂದೆಡೆ ಭೂ ಪದರದ ನೈಸರ್ಗಿಕ ವ್ಯವಸ್ಥೆ ಹಾಳಾಗಿ ಭೂ ಸವಕಳಿ ಉಂಟಾಗುತ್ತಿದೆ. ಇದರ ಪರಿಣಾಮವೇ ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಕೆಂಪುಹೊಳೆ, ನೇತ್ರಾವತಿ ನದಿಗಳು ಸಹ ಬತ್ತಿ ಹೋಗಿದ್ದನ್ನು ನೋಡಿಕೊಂಡು ಪ್ರಜ್ಞಾವಂತರಾದ ನಾವುಗಳು ಮೌನಕ್ಕೆ ಶರಣಾದರೆ ಮುಂದೆ ಭಾರೀ ಗಂಡಾಂತರ ಎದುರಿಸ ಬೇಕಾಗುತ್ತದೆ. ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ಜಿಲ್ಲೆಯ ವೈದ್ಯರುಗಳಿಂದ ಈ ಜಾಥಾ ಆಯೋಜಿಸಲಾಗಿದೆ ಎಂದರು.

500 ಸಸಿ ವಿತರಣೆ: ದಂತ ವೈದ್ಯ ಕಿಶೋರ್‌ ಮಾತನಾಡಿ, ಕೇವಲ ಕಾಟಾಚಾರಕ್ಕೆ ಈ ಕಾರ್ಯಕ್ರಮವನ್ನು ಮಾಡುತ್ತಿಲ್ಲ. ಇಂದು ಸುಮಾರು 500ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಗು ತ್ತಿದೆ. ಕೇವಲ ಸಸಿಗಳನ್ನು ನೆಟ್ಟರೆ ಸಾಲದು ಸಾಲುಮರದ ತಿಮ್ಮಕ್ಕನಂತೆ ಪೋಷಿಸಿ ಬೆಳೆಸಬೇಕು. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಗಾಗಿ ಸ್ವಲ್ಪ ಹಣವನ್ನು ಮೀಸಲಿಟ್ಟು ಹಲವು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

Advertisement

ಈ ಸಂದರ್ಭದಲ್ಲಿ ವೈದ್ಯರಾದ ಡಾ.ಮೋಹನ್‌ ದಾಸ್‌ ಶೆಟ್ಟಿ, ದಂತ ವೈದ್ಯ ರವಿಕಿರಣ್‌, ಡಾ.ನವೀನ್‌ ಚಂದ್ರ ಶೆಟ್ಟಿ, ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಆರ್‌.ಎನ್‌ ಕೃಷ್ಣಮೂರ್ತಿ, ವಿಜಯ್‌ ಕುಮಾರ್‌ ಜೈನ್‌, ಪರಿಸರವಾದಿ ಕಿಶೋರ್‌, ಡಾ.ಲೀಲಾವತಿ ಜನಾರ್ದನ್‌ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next