Advertisement
ಸ್ವಂತ ಖರ್ಚಿನಲ್ಲಿ ಪರಿಸರ ಪ್ರೇಮ: ಇದು ನಿಜವಾದ ಪರಿಸರ ಪ್ರೇಮಿಯೊಬ್ಬರ ಕಥೆ ಲಕ್ಷಾಂತರ ರೂ. ಖರ್ಚು ಮಾಡಿ ಪರಿಸರ ಕಾಳಜಿ. ಹೌದು…. ಬರಡು ಭೂಮಿಯಾಗಿದ್ದ ಜಾಗದಲ್ಲಿ ಸುತ್ತಲೂ ಬೆಳೆದಿರುವ ಮರಗಿಡಗಳು. ಪ್ರತಿನಿತ್ಯ ಇದೇ ಜಾಗದಲ್ಲಿ ಪ್ರಾಣಿ, ಪಕ್ಷಿಗಳು ಬಂದು ಇಲ್ಲಿ ಆಶ್ರಯ ಪಡೆಯುತ್ತವೆ. ಈ ಸುಂದರ ವನ ನಿರ್ಮಾಣ ಮಾಡೋದಿಕ್ಕೆ ಶ್ರಮಪಟ್ಟಿದ್ದು, ಬೇರೆ ಯಾರು ಅಲ್ಲ ಇವರೇ ನೋಡಿ ಭೂಹಳ್ಳಿ ಪುಟ್ಟಸ್ವಾಮಿ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಭೂಹಳ್ಳಿ ಗ್ರಾಮ ದವರಾದ ಪುಟ್ಟಸ್ವಾಮಿ 32 ವರ್ಷ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.
Related Articles
Advertisement
ಜೀವೇಶ್ವರ ವನ ನಿರ್ಮಾಣ: ಚನ್ನಪಟ್ಟಣ-ಸಾತನೂರು ರಸ್ತೆಯ ಮಹದೇಶ್ವರ ದೇವಾಲಯದ ಆವರ ಣದಲ್ಲಿ ಪಾಳು ಬಿದ್ದಿದ್ದ ಮೂರು ಎಕರೆ ಸರ್ಕಾರಿ ಜಾಗದಲ್ಲಿ ಜೀವೇಶ್ವರ ವನವನ್ನು ನಿರ್ಮಾಣಮಾಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ರೂಢಿಸಿ ಕೊಂಡ ಪರಿಸರ ಪ್ರೇಮ ತಮ್ಮ ನಿವೃತ್ತಿ ಅಂಚಿನವರೆಗೂ ಕೂಡ ರೂಢಿಸಿಕೊಂಡು ಬಂದಿದ್ದಾರೆ. ಒಟ್ಟಾರೆ ಕಾಡು ಬೆಳೆಸುವುದರಿಂದ ನಮಗಷ್ಟೇ ಅಲ್ಲದೆ, ಇಡೀ ಜೀವರಾಶಿಗೆ ಅನುಕೂಲದೆ. ನಾನು ಈಗ ನಿವೃತ್ತಿಜೀವನವನ್ನು ನಡೆಸುತ್ತಿದ್ದೇನೆ. ನನಗೆ ಬರುವ ನಿವೃತ್ತಿವೇತನದಿಂದ ಉದ್ಯಾನಗಳಲ್ಲಿ ಗಿಡ ನೆಟ್ಟು, ಪೋಷಣೆ ಮಾಡುತ್ತಿದ್ದೇನೆ ಎನ್ನುವ ಪರಿಸರ ಪ್ರೇಮಿ ಪುಟ್ಟಸ್ವಾಮಿ ಅವರನ್ನು ನಿಜಕ್ಕೂ ಶ್ಲಾಘಿಸಬೇಕು.
40 ಲಕ್ಷಕ್ಕೂ ಹೆಚ್ಚು ಹಣ ಖರ್ಚು : ಇದುವರೆಗೂ ಪರಸರ ಸಂರಕ್ಷಣೆಗಾಗಿ ಸುಮಾರು 40ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಗಿಡಗಳನ್ನ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪರಿಸರ ಪ್ರೇಮಿ ಭೂವಳ್ಳಿ ಪುಟ್ಟಸ್ವಾಮಿ ಅವರ ಸಾಧನೆ ಅಜರಾಮರ. ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡಿ ದೊಡ್ಡ ದೊಡ್ಡ ಮರಗಳನ್ನ ಕೊಳ್ಳೆ ಹೊಡೆಯುತ್ತಿರುವಾಗ ತಮ್ಮ ಸ್ವಂತ ಹಣದಲ್ಲಿ ಸಸಿ ನೆಟ್ಟುಪರಿಸರ ಪ್ರೇಮವನ್ನ ಮೆರೆಯುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಪುಟ್ಟಸ್ವಾಮಿ.
-ಎಂ. ಶಿವಮಾಧು