Advertisement

ಪರಿಸರ ಸಂರಕ್ಷಿಸದಿದ್ದರೆ ಮನುಕುಲಕ್ಕೆ ಗಂಡಾಂತರ

06:41 AM Jun 09, 2020 | Suhan S |

ಲಕ್ಷ್ಮೇಶ್ವರ: ಜೀವ ಸಂಕುಲದ ಉಳಿವಿಗಾಗಿ ಅವಶ್ಯವಿರುವ ನೆಲ, ಜಲ, ಅರಣ್ಯ ಸಂಪತ್ತನ್ನು ಕಾಪಾಡಿ ಉಳಿಸಿ ಬೆಳೆಸದಿದ್ದರೆ ಮುಂದಿನ ಪೀಳಿಗೆ ಬಹಳಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟಿ ಹೇಳಿದರು.

Advertisement

ಅವರು ಪುರಸಭೆ, ಪೊಲೀಸ್‌, ಆರೋಗ್ಯ ಇಲಾಖೆಯವರಿಂದ ಕೈಗೊಂಡ ಸಾರ್ವಜನಿಕ ಸ್ಥಳಗಳಲ್ಲಿ ಗಿಡನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಿಡಮರಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ಮೆರೆಯಬೇಕು. ಯಾವ ಪರಿಸರ ನಮ್ಮನ್ನು ರಕ್ಷಿಸುತ್ತದೆಯೂ ಆ ಪರಿಸರವನ್ನು ಸಂರಕ್ಷಿಸದಿದ್ದರೆ ಇಡೀ ಮನುಕುಲಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಎಪಿಎಂಸಿ ನೂತನ ಅಧ್ಯಕ್ಷ ನೀಲಪ್ಪ ಹತ್ತಿ ಅವರು ಮಾತನಾಡಿ, ತಾಲೂಕು ಆಡಳಿತ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ಪುರಸಭೆಯವರು ಈ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಯಲ್ಲಿ ಎಲ್ಲರ ಪಾತ್ರವಿದೆ ಎನ್ನುವ ಅರಿವು ಮೂಡಿಸುತ್ತಿದ್ದಾರೆ. ಪರಿಸರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಖಾಲಿ ಜಾಗೆಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡೋಣ ಎಂದು ಹೇಳಿದರು.

ಪಿಎಸ್‌ಐ ಶಿವಯೋಗಿ ಲೋಹಾರ, ಶಿವಾನಂದ ಕಾರಜೋಳ, ಎಪಿಎಂಸಿ ಕಾರ್ಯದರ್ಶಿ ಎನ್‌.ಎ. ಲಕ್ಕುಂಡಿ, ಪುರಸಭೆ ಮುಖ್ಯಾಧಿಕಾರಿ ಆರ್‌.ಎಂ. ಪಾಟೀಲ, ಫಕ್ಕೀರೇಶ ರಟ್ಟಿಹಳ್ಳಿ, ಮಹೇಶ ಲಮಾಣಿ, ಗಂಗಾಧರ ಮೆಣಸಿನಕಾಯಿ, ಪುರಸಭೆ ಸದಸ್ಯೆ ವಾಣಿ ನೀಲಪ್ಪ ಹತ್ತಿ, ನೀಲಪ್ಪ ಕರ್ಜೆಕಣ್ಣವರ, ದುಂಡೇಶ ಕೊಟಗಿ, ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next