Advertisement

ಮತದಾರರಲ್ಲೂ ಕಾರ್ಯಕರ್ತರ ಉತ್ಸಾಹ-Congressನಿಂದ ಪರಿವರ್ತನೆ ಎಂಬ ಭರವಸೆ :ಭೀಮಣ್ಣ‌ ನಾಯ್ಕ

04:29 PM Apr 20, 2023 | Team Udayavani |

ಶಿರಸಿ: ಸಿದ್ದಾಪುರ, ಶಿರಸಿ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಯ ಜೊತೆ ಆರೋಗ್ಯಕ್ಕೆ ಸಂಬಂಧಿಸಿ ಸಕಲ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಾಗ್ದಾನ ಮಾಡಿದರು.

Advertisement

ಗುರುವಾರ ತಾಲೂಕಿನ ಮಂಜುಗುಣಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧಡೆ ಕಾರ್ಯಕರ್ತರ ಭೇಟಿ, ಮತದಾರರ ಸಂಪರ್ಕ ಮಾಡಿದ ಬಳಿಕ ಮಾತನಾಡಿದರು.
ಬಹುತೇಕ ಗ್ರಾಮೀಣ ರಸ್ತೆಗಳು ಅರಬರೆಯಾಗಿದೆ. ಎಷ್ಟೋ ಊರುಗಳುಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಅರಿವಿಗೆ ಬಂದಿದೆ. ಸರಕಾರಿ ಸೌಲಭ್ಯಗಳು ಅರ್ಹರಿಗೆ ತಲುಪಿಸುವ ಕಾರ್ಯ ಆಗಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ ಎಂದರು.

ಆರೋಗ್ಯ ಸಂಬಂಧಿ ಕೊರತೆ ನೀಗಿಸಲೂ ಪ್ರಯತ್ನ ಮಾಡಬೇಕಿದೆ. ಅದಕ್ಕೂ ಆದ್ಯತೆಯಲ್ಲಿ ಕೆಲಸ ‌ಮಾಡಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿ ತುರ್ತು ಸೇವೆಗೆ ಹೊರ ಜಿಲ್ಲೆಯ ಸೌಲಭ್ಯ ಅವಲಂಬಿಸಬೇಕಾಗಿದೆ. ಅದರ ಜೊತೆಗೆ ಪ್ರವಾಸೋದ್ಯಮಕ್ಷೇತ್ರದ ಅಭಿವೃದ್ದಿ, ಯುವಕರಿಗೆ ಮಾದರಿ ಉದ್ಯೋಗಕ್ಕೂ ಹೆಜ್ಜೆ ಇಡಲಾಗುತ್ತದೆ ಎಂದರು.
ಈಗಾಗಲೇ ಕಾಂಗ್ರೆಸ್ ನೀಡದ ಗ್ಯಾರೆಂಟಿ ಕಾರ್ಡ ಜೊತೆಗೆ ಇನ್ನೂ ಅನೇಕ ಯೋಜನೆಯ ಪ್ರಣಾಳಿಕೆಯನ್ನು ಘೋಷಿಸಲಾಗುತ್ತದೆ. ಕಾಂಗ್ರೆಸ್ ನೀಡಿದ ಭಾಷೆಗೆ ತಪ್ಪಿ ನಡೆಯುವದಿಲ್ಲ ಎಂದರು.

ಬಿಜೆಪಿಯಿಂದ ಜಗದೀಶ ಶೆಟ್ಟರ ಅವರು ಕಾಂಗ್ರೆಸ್ ಸೇರಿದ್ದೂ ಇನ್ನಷ್ಟು ಶಕ್ತಿ ಬಂದಿದೆ. ಕ್ಷೇತ್ರದಲ್ಲಿ, ರಾಜ್ಯದಲ್ಲೂ ಬದಲಾವಣೆ ಗಾಳಿ ಇದೆ. ಈ ಬಾರಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆ ಅವಕಾಶ ನೀಡಲು ವಿನಂತಿಸುತ್ತೇವೆ. ನೀವು ಬಯಸಿದ ಆಡಳಿತ ನೀಡುತ್ತೇವೆ ಎಂದರು.

Advertisement

ಇದನ್ನೂ ಓದಿ: Karnataka election 2023: ಪುತ್ತೂರು- ಬಡವರು ಗೆಲ್ಲಲು ಕಾಂಗ್ರೆಸ್‌ ಗೆಲ್ಲಿಸಿ: ಅಶೋಕ್‌ ರೈ

ಭೀಮಣ್ಣ ನಾಯ್ಕ ಅವರು, ಬಂಡಲ ಮತ್ತು ಮಂಜುಗುಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಟದಗದ್ದೆ, ಮಲ್ಲಳ್ಳಿ, ಮುಂಡಗಾರ, ಕುಪ್ಪಳ್ಳಿ, ತೆಪ್ಪಾರ, ಹೊಸ್ಕೆರೆ, ಕಳಕಾರ, ಬಡಗಿ, ಐಗಿನಮನೆ, ಖೂರ್ಸೆ , ಮಂಜುಗುಣಿ, ಕಳುಗಾರ, ಸವಲೆ, ಬೈಲ್ ಗದ್ದೆ ಭಾಗದಲ್ಲಿ ಜನರ ಜೊತೆ ಸಂಪರ್ಕ ಮಾಡಿ ಮತ ಯಾಚನೆ ಮಾಡಿದರು.
ಈ ವೇಳೆ ಬ್ಲಾಕ್ ಅಧ್ಯಕ್ಷ ಜಗದೀಶ ಗೌಡ, ಮುಖಂಡರಾದ ಪ್ರವೀಣ ಗೌಡ, ದೇವರಾಜ ಮರಾಠಿ, ಜ್ಯೋತಿ ಪಾಟೀಲ, ನಾಗರಾಜ ಮುರ್ಡೇಶ್ವರ, ನಾರಾಯಣ ನಾಯ್ಕ್ ಸೇರಿದಂತೆ ಇತರ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇನ್ನಷ್ಟು ಶಕ್ತಿ ತುಂಬುತ್ತಿದೆ. ಜನರ ನೋವಿಗೆ ಕಾಂಗ್ರೆಸ್ ಮಾತ್ರ ಭರವಸೆಯ ಶಕ್ತಿ ಎಂದು ಮತದಾರರೇ ಹೇಳುತ್ತಿದ್ದಾರೆ.
-ಭೀಮಣ್ಣ ನಾಯ್ಕ, ಕಾಂಗ್ರೆಸ್ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next