Advertisement
ಕಿರೀಟದೊಳಗೆ ನೂರೆಂಟು ಅಂಶ…“ಇದು ನನ್ನ ಮೊದಲ ಚಿತ್ರ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದಿದ್ದೇನೆ. ಚಂದ್ರಶೇಖರ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಇಡೀ ಚಿತ್ರ ಬೆಂಗಳೂರಲ್ಲೇ ಸುಮಾರು 80 ದಿನಗಳ ಕಾಲ ಚಿತ್ರೀಕರಣವಾಗಿದೆ. ಈಗಾಗಲೇ ಚಿತ್ರದ ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಟ್ರೇಲರ್ ಕೂಡ ಜನರಿಗೆ ತಲುಪಿದ್ದು, ಸಿನಿಮಾ ನೋಡುವ ಕುತೂಹಲದಲ್ಲಿದ್ದಾರೆ ಎಂಬುದೇ ಖುಷಿಯ ವಿಷಯ.
Related Articles
Advertisement
ಮನರಂಜನೆಯ ಪಾಕನಾಯಕ ಸಮರ್ಥ್ಗೆ ಇದು ಮೊದಲ ಚಿತ್ರವಂತೆ. “ನಿರ್ದೇಶಕರು ಕಥೆ, ಪಾತ್ರ ವಿವರಿಸಿದಾಗ, ಅದೊಂದು ಚಾಲೆಂಜಿಂಗ್ ಎನಿಸಿತು. ಸ್ಟ್ರಾಂಗ್ ಆಗಿರುವ ನಾಲ್ಕು ಶೇಡ್ ಬರುವ ಪಾತ್ರವದು. ಮೆಚೂರ್ಡ್ ಹೀರೋ ಮಾಡುವಂತಹ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ. ಮೊದಲು ಆ ಪಾತ್ರವನ್ನು ನನ್ನ ಕೈಯಲ್ಲಿ ಮಾಡೋಕೆ ಆಗುತ್ತಾ ಎಂಬ ಪ್ರಶ್ನೆ ಎದುರಾಯಿತು. ಆದರೂ, ತಯಾರಿ ಮಾಡಿಕೊಂಡೇ ಮಾಡಿದ್ದೇನೆ. ಈಗಿನ ಯೂತ್ಸ್ಗೆ ಲೀಡರ್ ಆಗಿರುವಂತಹ ಪವರ್‌ಫುಲ್ ಪಾತ್ರ ಮಾಡಿದ್ದು ಖುಷಿ ಕೊಟ್ಟಿದೆ. ಇಲ್ಲಿ ಎಲ್ಲೂ ಕಷ್ಟ ಎನಿಸಲಿಲ್ಲ. ಯಾಕೆಂದರೆ, ನಾನು ದಿಢೀರನೇ ಬಂದು ಹೀರೋ ಆಗಿಲ್ಲ. ರಂಗಭೂಮಿಯಲ್ಲಿ ಕೆಲಸ ಮಾಡಿದವನು ನಾನು. ಎಂಟು ವರ್ಷಗಳ ಕಾಲ ಎಲ್ಲವನ್ನೂ ಕಲಿತಿದ್ದೇನೆ. ಸ್ಟಂಟ್ಸ್ ಗೊತ್ತಿದೆ. ಡ್ಯಾನ್ಸ್ ಬಗ್ಗೆಯೂ ತಿಳಿದಿದೆ. ಹಲವಾರು ಕಡೆ ನಾಟಕ ಪ್ರದರ್ಶನ ಕೊಟ್ಟಿದ್ದೇನೆ. ಸಿನಿಮಾಗಾಗಿ ತಯಾರಿ ಮಾಡಿಕೊಂಡೇ ಇಲ್ಲಿಗೆ ಬಂದಿದ್ದೇನೆ. ಹಾಗಾಗಿ ನನಗೆ ಯಾವುದೇ ಕಷ್ಟ ಆಗಲಿಲ್ಲ. ಚಿತ್ರದಲ್ಲಿ ಡಾ.ರಾಜಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಶ್ ಸೇರಿದಂತೆ ಕನ್ನಡದ ನಟರ ಕಟೌಟ್‌ನ ಬ್ಯಾಕ್‌ಡ್ರಾಪ್‌ನಲ್ಲಿ ಬರುವ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಸಮರ್ಥ್. “ಚಿತ್ರದಲ್ಲಿ ನಾನು ಸ್ವತಃ ಸ್ಟಂಟ್ಸ್ ಮಾಡಿದ್ದೇನೆ. ರಿಸ್ಕ್ ಇದ್ದರೂ, ಸಹ ಅದನ್ನು ಲೆಕ್ಕಿಸದೆ ಕೆಲಸ ಮಾಡಿದ್ದೇನೆ. ಇನ್ನು, ವಿಶೇಷವೆಂದರೆ, ಚಿತ್ರದ ಒಂದು ದೃಶ್ಯದಲ್ಲಿ ಹನ್ನೆರೆಡು ಪೇಜ್ ಇರುವ ಡೈಲಾಗ್ ಅನ್ನು ಸಿಂಗಲ್ ಶಾಟ್‌ನಲ್ಲಿ ಹೇಳಿ ಆ ದೃಶ್ಯವನ್ನು ಓಕೆ ಮಾಡಿದ್ದೇನೆ. ಎರಡುವರೆ ನಿಮಿಷದ ಆ ದೃಶ್ಯ ಚಿತ್ರದ ವಿಶೇಷ. ಇನನು ಚಿತ್ರದಲ್ಲಿ ದೀಪ್ತಿ ತಾಪ್ಸೆ, ರಿಷಿಕಾ ಸಿಂಗ್, ಲೇಖಾ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ. ಮಂಜುನಾಥ್ ಗೌಡ್ರು ವಿಲನ್ ಆದರೆ, ದಿನೇಶ್ ಮಂಗಳೂರು ಪೋಷಕ ನಟರಾಗಿ ನಟಿಸಿದ್ದಾರೆ’ ಎನ್ನುತ್ತಾರೆ. ಚಿತ್ರದಲ್ಲಿ ದೀಪ್ತಿ ಕಾಪ್ಸೆ, ಲೇಖಾ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ. ದೀಪ್ತಿ ಇಲ್ಲಿ ಯಾರೂ ಇಲ್ಲದ ಅನಾಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಗೊತ್ತು ಗುರಿ ಇಲ್ಲದೇ ಸಿಟಿಗೆ ಬರುವ ಹುಡುಗಿ ಅನುಭವಿಸುವ ಯಾತನೆಗಳನ್ನು ಅವರ ಪಾತ್ರದ ಮೂಲಕ ತೋರಿಸಲಾಗಿದೆಯಂತೆ. ಲೇಖಾ ಚಂದ್ರ ಸಿನಿಮಾದಲ್ಲಿ ನಟಿಸಿದ ಖುಷಿಯಷ್ಟೇ ಹಂಚಿಕೊಂಡಿದ್ದಾರೆ. ವಿಲನ್ ಆಗಿ ನಟಿಸಿದ “ಉಗ್ರಂ’ ಮಂಜು ಸಿನಿಮಾದುದ್ದಕ್ಕೂ ಕಾಣಿಸಿಕೊಂಡ ಖುಷಿ ಹಂಚಿಕೊಂಡರು. ಚಿತ್ರವನ್ನು ಚಂದ್ರಶೇಖರ್ ನಿರ್ಮಿಸಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ.