ಬೆಂಗಳೂರು: ನಗರದಲ್ಲಿ 3.90 ಲಕ್ಷ ಜನ ಸಾರ್ವಜನಿಕರು ಸ್ವಯಂ ಆಸ್ತಿ ವಿವರ ಘೋಷಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಪ್ಪಾದ ವಲಯ ನಮೂದಿಸುವ ಮೂಲಕ ಪಾಲಿಕೆಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ನಗರದಲ್ಲಿ ಸ್ವಯಂ ಆಸ್ತಿ ಘೋಷಣೆ ಅಡಿ ಸಾರ್ವಜನಿಕರಿಗೆ ಆಸ್ತಿ ವ್ಯಾಪ್ತಿ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಸಾರ್ವಜನಿಕರು ಆಸ್ತಿ ಮಾಹಿತಿ ಘೋಷಣೆ ಮಾಡುವ ಸಂದರ್ಭದಲ್ಲಿ ತಪ್ಪಾಾದ ವಲಯ ಆಯ್ಕೆ ಮಾಡಿಕೊಂಡು ಪಾಲಿಕೆಗೆ ಕೋಟ್ಯಾಾಂತರ ರೂ. ನಷ್ಟ ಉಂಟು ಮಾಡಿದ್ದಾಾರೆ. ಇದರಲ್ಲಿ ಪಾಲಿಕೆಯ ಕೆಲವು ಕಂದಾಯ ಅಧಿಕಾರಿಗಳು ಶಾಮೀಲಾಗಿದ್ದು, ಕೆಲವು ಆಸ್ತಿ ಮಾಲೀಕರಿಗೆ ನೆರವಾಗಿದ್ದಾಾರೆ ಎಂದು ಖುದ್ದು ಆಯುಕ್ತರೇ ತಿಳಿಸಿದ್ದಾಾರೆ.
ಅಲ್ಲದೆ, ವಾಣಿಜ್ಯ ಕಟ್ಟಡವನ್ನು ವಸತಿ ಕಟ್ಟಡ ಎಂದು ಹಾಗೂ ಐಷಾರಾಮಿ ವಾಣಿಜ್ಯ ಕಟ್ಟಡವನ್ನು ಸಾಮಾನ್ಯ ವಾಣಿಜ್ಯ ಉಪಯೋಗಿ ಕಟ್ಟಡ ಎಂದು ನಮೂದಿಸಿ ಆಸ್ತಿ ತೆರಿಗೆ ವಂಚನೆ ಮಾಡಲಾಗಿದೆ.ಹೀಗಾಗಿ, ಮಾಲೀಕರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಲಾಗುವುದು ಎಂದರು.
ವಂಚಿಸಿದ ತೆರಿಗೆಯ ದುಪ್ಪಟ್ಟು ವಸೂಲಿ: ಆಸ್ತಿ ತೆರಿಗೆ ಮಾಹಿತಿ ತಪ್ಪಾಾಗಿ ನಮೂದಿಸುವುದು, ತಪ್ಪಾಾದ ವಲಯ ನಮೂದು ಮಾಡುವ ಮೂಲಕ ಆಸ್ತಿ ತೆರಿಗೆಯಿಂದ ನುಣುಚಿಕೊಂಡಿದ್ದ 3.90 ಲಕ್ಷ ಜನ ಬಾಕಿ ಆಸ್ತಿ ತೆರಿಗೆ ಪಾವತಿ (ನೈಜ ವಲಯಾನುಸಾರ) ಮತ್ತು ಈ ತಪ್ಪಿಗೆ ದಂಡ ಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗುತ್ತಿಿದೆ. ನೈಜ ವಿಸ್ತೀರ್ಣದ ತೆರಿಗೆ ಆಧರಿಸಿ ದುಪ್ಪಟ್ಟು ತೆರಿಗೆ ಮತ್ತು ಮಾಸಿಕ ಶೇ.2 ಬಡ್ಡಿಯನ್ನು ವಿಧಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ವಲಯ ಆಯ್ಕೆಯಲ್ಲಿ ಬದಲಾವಣೆ: ಆಸ್ತಿ ತೆರಿಗೆ ಮಾಹಿತಿ ದಾಖಲಿಸಲು ಜಿಯೋ ಮ್ಯಾಾಪಿಂಗ್ ವ್ಯವಸ್ಥೆ ಜಾರಿ ಮಾಡಲಾಗಿದ್ದು, ಇದರಲ್ಲಿ ವಲಯದ ಆಯ್ಕೆೆಯನ್ನು ಕಂದಾಯ ಅಧಿಕಾರಿಗಳಾಗಲಿ ಅಥವಾ ಸಾರ್ವಜನಿಕರಾಗಲಿ ನಮೂದಿಸಲು ಸಾಧ್ಯವಿಲ್ಲ. ಒಮ್ಮೆ ಸಾರ್ವಜನಿಕರು
ಒಂದು ನಿರ್ದಿಷ್ಟ ಪ್ರದೇಶದ ಮಾಹಿತಿ ದಾಖಲಿಸುತ್ತಿದ್ದಂತೆ ವಲಯ ಕಾಣಿಸಲಿದೆ. ಇದರಿಂದ ಅವ್ಯವಹಾರ ತಪ್ಪಲಿದೆ ಎಂದು ಮಾಹಿತಿ ನೀಡಿದರು.