Advertisement

ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರುವಂತಿಲ್ಲ

07:11 AM Aug 24, 2020 | Hari Prasad |

ಹೊಸದಿಲ್ಲಿ: ಅಂತಾರಾಜ್ಯ ಮತ್ತು ರಾಜ್ಯಗಳ ಒಳಗೆ ಜನ ಸಂಚಾರ ಮತ್ತು ಸರಕು ಸಾಗಣೆಗೆ ನಿರ್ಬಂಧ ಹೇರುವಂತಿಲ್ಲ ಎಂದು ಎಲ್ಲ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶನಿವಾರ ಕೇಂದ್ರ ಸರಕಾರವು ಸೂಚನೆ ರವಾನಿಸಿದೆ.

Advertisement

ಇದರೊಂದಿಗೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ನಡುವೆ ಕಗ್ಗಂಟಾಗಿರುವ ಸಂಚಾರ ಸಂಕಷ್ಟ ಬಗೆಹರಿಯುವ ಸಾಧ್ಯತೆಯಿದೆ.

ಜನರ ಮತ್ತು ಸರಕುಗಳ ಸಂಚಾರಕ್ಕೆ ನಿರ್ಬಂಧ ಪೂರೈಕೆ ಸರಪಳಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಲ್ಲದೆ ಇದು ವಿಪತ್ತು ನಿರ್ವಹಣೆ ಕಾಯ್ದೆ, 2005ರ ಅನ್ವಯ ಕೇಂದ್ರ ಗೃಹ ಇಲಾಖೆ ಹೊರಡಿಸಿದ ಮಾರ್ಗಸೂಚಿಯ ಉಲ್ಲಂಘನೆಯಾಗುತ್ತದೆ ಎಂದು ಅಧಿಸೂಚನೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ತಿಳಿಸಿದ್ದಾರೆ.

ಹೀಗಾಗಿ ರಾಜ್ಯ ಅಥವಾ ಅಂತಾರಾಜ್ಯ ಸರಕು, ಸೇವೆಗಳು ಮತ್ತು ಜನರ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರುವಂತಿಲ್ಲ. ಜತೆಗೆ ಇದಕ್ಕೆ ವಿಶೇಷ ಪಾಸ್‌, ಅನುಮತಿ ಪಡೆಯುವ ಅಗತ್ಯವೂ ಇಲ್ಲ ಎಂದು ಭಲ್ಲಾ ಹೇಳಿದ್ದಾರೆ.

ಸಲಹೆ ಬಂದಿಲ್ಲ: ಕಾಸರಗೋಡು ಜಿಲ್ಲಾಧಿಕಾರಿ
ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆಯು ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಿಂದ ನೆರೆಯ ಕೇರಳದ ಕಾಸರಗೋಡು ಮತ್ತಿತರ ಪ್ರದೇಶಗಳಿಗೆ ದೈನಿಕ ಉದ್ಯೋಗ ಮತ್ತು ಇತರ ಅಗತ್ಯಗಳಿಗಾಗಿ ತೆರಳುವ ಜನರ ಸಂಕಷ್ಟವನ್ನು ಕೊನೆಗಾಣಿಸುವ ನಿರೀಕ್ಷೆ ಇದೆ.

Advertisement

ಆದರೆ ಕೇಂದ್ರದ ಆದೇಶದ ಬಗ್ಗೆ ಕೇರಳ ಸರಕಾರದಿಂದ ಯಾವುದೇ ಸಲಹೆ ಬಂದಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದು, ಕೇರಳ ಸರಕಾರದ ನಿರ್ದೇಶನದಂತೆ ನಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸಮಸ್ಯೆಯ ಬಗ್ಗೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಜತೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೋಮವಾರ ಚರ್ಚಿಸಲಿದ್ದು, ಸ್ಪಷ್ಟ ಚಿತ್ರಣ ಲಭಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next