Advertisement

“ಓದುವುದರಿಂದ ಜ್ಞಾನ ಸಂಪತ್ತು ವೃದ್ಧಿ’

08:30 PM Jun 28, 2019 | Sriram |

ಬದಿಯಡ್ಕ: ಪುಸ್ತಕಗಳು ಜ್ಞಾನದ ಸಂಪತ್ತು. ಓದುವ ಹವ್ಯಾಸ ಬೆಳೆಸುವುದರಿಂದ ಅಪಾರ ಸಾಧನೆಗಳ ಅರಿವು, ಬದುಕಿನ ಶ್ರೇಷ್ಠ ಸ್ಥಿತಿ ತಲುಪಲು ಸಾದ್ಯ. ಓದುವಿಕೆ ಬೆಳೆಸಲು ಈ ದಿನ ಸ್ಫೂರ್ತಿ ನೀಡಲಿ ಎಂದು ಪೆರಡಾಲ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಹೇಳಿದರು. ಪಿ.ಎನ್‌.ಪಣಿಕ್ಕರ್‌ ಸಂಸ್ಮರಣಾರ್ಥ ನಡೆಸುವ ವಾಚನ ವಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಿಕ್ಷಕಿ ಪ್ರಸೀತಾ ಕುಮಾರಿ ವಾಚನ ಪ್ರತಿಜ್ಞೆ ಬೋಧಿಸಿದರು. ಶರಣ್ಯ, ಐಶ್ವರ್ಯ, ಸಂಸೀರಾ, ಸಜಿನಾ , ಝಾಕಿರಾ, ನಂದನ ಅವರು ಪಣಿಕ್ಕರ್‌ ಅವರ ಜೀವನ ಸಾಧನೆ, ಪುಸ್ತಕ ಪರಿಚಯ, ಭಾಷಣ ಮಂಡಿಸಿದರು. ಪ್ರಮೋದ ಕುಮಾರ್‌ ಸ್ವಾಗತಿಸಿದರು. ಗೋಪಾಲಕೃಷ್ಣ ಭಟ್‌ ವಂದಿಸಿದರು.

ದಿವ್ಯಗಂಗಾ, ಲಲಿತಾಂಬಾ, ಚಂದ್ರಶೇಖರ, ರಿಶಾದ್‌, ಲಿಬಿಜಾ, ಬೀನಾ, ಪ್ರೀತಾ, ಶ್ರೀಧರನ್‌, ಶ್ರೀಧರ ಭಟ್‌ ಉಪಸ್ಥಿತರಿದ್ದರು. ಪುಸ್ತಕ ಪ್ರದರ್ಶನ, ರಸಪ್ರಶ್ನೆ, ಕಥೆ ಕವಿತೆ ರಚನೆ, ಪುಸ್ತಕ ವಿಮರ್ಶೆ, ಹಸ್ತಪತ್ರಿಕೆ ರಚನೆ ಮುಂತಾದ ಕಾರ್ಯಕ್ರಮಗಳನ್ನು ವಾರದಾದ್ಯಂತ ಹಮ್ಮಿಕೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next