ಇಂದೋರ್: ವಿದೇಶಗಳಲ್ಲಿರುವ ಭಾರತೀಯರು, ಮಾತೃಭೂಮಿಯೊಂದಿಗೆ ಹೊಂದಿರುವ ನಂಟು ವಿಶ್ವದೆಲ್ಲೆಡೆ ಅನಿವಾಸಿ ಭಾರತೀಯರನ್ನು ಗುರುತಿಸುವಂತೆ ಮಾಡಿದೆ.
ಆ ಮೂಲಕ ಭಾರತದ ಸಂಸ್ಕೃತಿ-ಸಂಪ್ರದಾಯಗಳು ಜಗದಗಲಕ್ಕೂ ವಿಸ್ತರಿಸುತ್ತಿವೆ ಎಂದು ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಹೇಳಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಪ್ರವಾಸಿ ಭಾರತೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು,ಜಗತ್ತಿನ ಬೇರೆ-ಬೇರೆ ದೇಶಗಳಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಾಗಿದೆ. ವಿಶೇಷವೆಂದರೆ ಈ ಎಲ್ಲಾ ಅನಿವಾಸಿ ಭಾರತೀಯ ಸಮುದಾಯಗಳು ಮಾತೃಭೂಮಿಯಾದ ಭಾರತದೊಂದಿಗೆ ವಿಶೇಷ ಬಾಂಧವ್ಯವನ್ನ ಹೊಂದಿವೆ.ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಬೆಸೆಯುವಲ್ಲಿ ಅನಿವಾಸಿ ಭಾರತೀಯರ ಪಾಲು ಮಹತ್ತರದ್ದು ಎಂದು ಶ್ಲಾಘಿಸಿದ್ದಾರೆ.
ಅನಿವಾಸಿ ಭಾರತೀಯ ಯುವ ಸಮುದಾಯವನ್ನು ಉದ್ದೇಶಿಸಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿದ್ದು,ಮಾತೃಭಮಿಯೊಂದಿಗೆ ನಂಟು ಗಟ್ಟಿಮಾಡಿಕೊಳ್ಳಲು ಇದೊಂದು ಸದಾವಕಾಶ ಎಂದರು.