Advertisement

ಎನ್ನ ಸಿನೆಮಾ ಶೂಟಿಂಗ್‌ ಪ್ರಾರಂಭ 

12:53 PM Oct 18, 2018 | Team Udayavani |

ವಿಶ್ವನಾಥ್‌ ಕೋಡಿಕಲ್‌ ಅವರ ಚೊಚ್ಚಲ ನಿರ್ದೇಶನದ ‘ಎನ್ನ’ ತುಳು ಚಿತ್ರದ ಮುಹೂರ್ತ ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು.

Advertisement

ಸಿನೆಮಾ ಗ್ಲೋರಿಯಸ್‌ ಎಂಗಲೋರ್‌ ಪ್ರೊಡಕ್ಷನ್‌ ಬ್ಯಾನರ್‌ ನಡಿಯಲ್ಲಿ ತಯಾರಾಗುತ್ತಿದ್ದು, ಸಿನೆಮಾವನ್ನು ಕ್ಯಾನುಟ್‌ ಮಥಾಯಸ್‌ ಹಾಗೂ ಉರ್ಬನ್‌ ಸಿಕ್ವೇರಾ ದುಬಾಯಿ ನಿರ್ಮಾಣ ಮಾಡುತ್ತಿದ್ದಾರೆ. ಮ್ಯಾಝಿಮ್‌ ಪಿರೇರಾ ಸಿನೆಮಾದ ಸಹ ನಿರ್ದೇಶಕರು. ಸಿನೆಮಾಕ್ಕೆ ವೈಶಾಲಿ ಉಡುಪಿ ಛಾಯಾಗ್ರಹಣ ಮಾಡುತ್ತಿದ್ದು, ಸಂಗೀತ ನಿರ್ದೇಶನ ರೋಹಿತ್‌ ಪೂಜಾರಿ, ಸಂಕಲನ ಅನುಷ್‌ ಚಂದ್ರ ಪ್ರಶಾಂತ್‌ ಸಿ.ಕೆ. ಅವರ ಸಂಭಾಷಣೆ, ಸಹಾಯಕ ನಿರ್ದೇಶಕರಾಗಿ ವಿನಯ ಕುಮಾರ್‌ ಉಜಿರೆ, ದಿಶಾಂತ್‌ ಶೆಟ್ಟಿ, ಭವ್ಯಶ್ರೀ ಕುಡುಪು, ಸತ್ಯವತಿ ಶೆಟ್ಟಿ, ಭಾರತಿ ಕಲ್ಲಡ್ಕ , ಧನುಷ್‌ ಬಜಾಲ್‌, ಧೀರಜ್‌ ಉಜಿರೆ ಕಾರ್ಯನಿರ್ವಹಿಸುತ್ತಿದ್ದು, ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ಪೃಥ್ವಿ ಅಂಬಾರ್‌, ವಿ.ಜಿ. ವಿನಿತ್‌, ಶ್ರುತಿ ಪೂಜಾರಿ, ನವೀನ್‌ ಬಂಟ್ವಾಳ್‌, ರಮೇಶ್‌ ರೈ ಕುಕ್ಕುವಳ್ಳಿ , ಧೀರಜ್‌ ನೀರ್‌ ಮಾರ್ಗ, ಪ್ರಶಾಂತ್‌ ಸಿ.ಕೆ., ಪ್ರತೀಕ್‌ ಅತ್ತಾವರ್‌ ಅಭಿನಯಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next