ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯ ಲೋಧಿ ಗಾರ್ಡನ್‌ಗೆ ಭೇಟಿ ಕೊಡುವ ಜನರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.
ನ್ಯೂಡೆಲ್ಲಿ ಮುನಿಸಿಪಲ್ ಕೌನ್ಸಿಲ್ (ಎನ್‌ಎಂಡಿಸಿ) ಎಪ್ರಿಲ್ 1ರಿಂದ ಲೋಧಿ ಗಾರ್ಡನ್‌ನಲ್ಲಿ ವೈಫೈ ಮೂಲಕ ಉಚಿತ ಇಂಟರ್‌ನೆಟ್ ಸೌಕರ್ಯ ಒದಗಿಸಲು ಉದ್ದೇಶಿಸಿದೆ.
ಈ ನಿಟ್ಟಿನಲ್ಲಿ ಆಗಬೇಕಾಗಿರುವ ಕೆಲಸಗಳು ಈಗಾಗಲೇ ಆರಂಭವಾಗಿವೆ; ಇನ್ನೊಂದು ತಿಂಗಳಲ್ಲಿ ಅದು ಮುಗಿಯಲಿದ್ದು ಎಪ್ರಿಲ್ 1ರಿಂದ ಲೋಧಿ ಗಾರ್ಡನ್ ಉಚಿತ ವೈಫೈ ವಲಯ ಆಗಲಿದೆ ಎಂದು ಎನ್‌ಎಂಡಿಸಿ ಅಧಿಕಾರಿ ಹೇಳಿದ್ದಾರೆ.
ಲೋಧಿ ಗಾರ್ಡನ್ ಪ್ರದೇಶ ಉಚಿತ ವೈಫೈ ವಲಯ ಆದ ಬಳಿಕ ದಿಲ್ಲಿಯ ಇತರ ಗಾರ್ಡನ್‌ಗಳನ್ನು ಕೂಡ ಉಚಿತ ವೈಫ್ ವಲಯವನ್ನಾಗಿ ಮಾಡುವ ಆಲೋಚನೆ ಇದೆ ಎಂದವರು ಹೇಳಿದ್ದಾರೆ.
ದಿಲ್ಲಿಯ ಪಾರ್ಕ್‌ಗಳನ್ನು ಉಚಿತ ವೈಫೈ ವಲಯಗಳನ್ನಾಗಿ ಮಾಡಿ ಪರಸ್ಪರ ಸಂಪರ್ಕ ಜಾಲದಲ್ಲಿ ಜೋಡಿಸುವುದು ಅಗತ್ಯವಿದೆ ಎಂದವರು ಹೇಳಿದರು.
ಸ್ಮಾರ್ಟ್ ಪೋಲ್‌ಗಳ ಮೂಲಕ ಲೋಧಿ ಗಾರ್ಡನ್‌ನಲ್ಲಿ ಉಚಿತ ವೈಫೈ ಸೇವೆಯನ್ನು ಒದಗಿಸಲಾಗುತ್ತಿದೆ ಎಂದವರು ಹೇಳಿದರು.