Advertisement

ಹಬ್ಬಗಳ ವೇಳೆ ಪ್ಲಾಸ್ಟಿಕ್‌ ಬ್ಯಾಗ್‌ ಬೇಡ: ಮೋದಿ: 93ನೇ ಮನ್‌ ಕೀ ಬಾತ್‌ ಆವೃತ್ತಿಯಲ್ಲಿ ಮನವಿ

01:21 AM Sep 26, 2022 | Team Udayavani |

ಹೊಸದಿಲ್ಲಿ: ಸೋಮವಾರದಿಂದ ದೇಶದಲ್ಲಿ ದಸರಾ ಹಬ್ಬದ ಸಂಭ್ರಮ ಆರಂಭವಾಗಲಿದೆ. ಈ ಸಂದರ್ಭದಲ್ಲಿ ದೇಶವಾಸಿಗಳು ವಸ್ತುಗಳನ್ನು ಸಾಗಿಸಲು ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಬಳಕೆ ಮಾಡದೆ, ಸ್ಥಳೀಯ ಸಂಸ್ಥೆಗಳು ಉತ್ಪಾದಿಸುವ ಕೈ ಚೀಲಗಳನ್ನು ಬಳಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

Advertisement

ರವಿವಾರ ಅವರು, ತಮ್ಮ ಮಾಸಿಕ “ಮನ್‌ ಕೀ ಬಾತ್‌’ನ 93ನೇ ಆವೃತ್ತಿಯಲ್ಲಿ ಈ ಸಲಹೆ ನೀಡಿದ್ದಾರೆ. ಸೆಣಬು, ಹತ್ತಿ, ಬಾಳೆಯ ನಾರುಗಳನ್ನು ಬಳಕೆ ಮಾಡಿ ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿದ ಕೈಚೀಲ, ಬ್ಯಾಗ್‌ಗಳನ್ನು ಮುಂದಿನ ದಿನಗಳಲ್ಲಿ ಬರುವ ಉತ್ಸವ ಸಂದರ್ಭದಲ್ಲಿ ಬಳಕೆ ಮಾಡಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೆ ವಿದಾಯ ಹೇಳಿ, ಇಂಥ ಬ್ಯಾಗ್‌ಗಳ ಬಳಕೆಯತ್ತ ಗಮನ ಹೆಚ್ಚುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೀತಾಗಳ ಆಗಮನ: ದೇಶಕ್ಕೆ ಚೀತಾಗಳು ಆಗಮಿಸಿದ್ದು ನಿಜಕ್ಕೂ 130 ಕೋಟಿ ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಅವರು ಪ್ರತಿಪಾದಿಸಿದ್ದಾರೆ. ಜನ ರಿಗೆ ಅವುಗಳನ್ನು ನೋಡಲು ಕುತೂಹಲ ಇದೆ. ಆದರೆ ಅವುಗಳ ಆರೋಗ್ಯದ ಮೇಲೆ ನಿಗಾ ಇರಿಸಲು ಟಾಸ್ಕ್ಫೋರ್ಸ್‌ ರಚಿಸಲಾಗಿದೆ. ಸಾರ್ವಜನಿಕರು ಚೀತಾಗ ಳನ್ನು ವೀಕ್ಷಿಸಬಹುದು ಎಂದು ಅದು ಸಲಹೆ ನೀಡಿದ ಬಳಿಕ ದೇಶವಾಸಿಗಳಿಗೆ ಅವಕಾಶ ನೀಡಲಾಗುತ್ತದೆ. ಅವುಗಳಿಗೆ ಹೆಸರುಗಳನ್ನು ನೀಡಲೂ ಮೈಗವ್‌.ಇನ್‌ನಲ್ಲಿ ಸಾರ್ವಜನಿಕರು ಸಲಹೆ ನೀಡಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next