Advertisement

ಇಂಗ್ಲಿಷ್‌ ನಾಮಫಲಕ ತೆರವು ಕಾರ್ಯಾಚರಣೆ

02:00 PM Nov 01, 2019 | Suhan S |

ಚಿಕ್ಕೋಡಿ: ನಗರದ ವಿವಿಧೆಡೆಗಳಲ್ಲಿ ಇಂಗ್ಲಿಷ್‌ ನಾಮಫಲಕಗಳನ್ನು ಪುರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು. ಅಂಗಡಿ ಮತ್ತು ಸರ್ಕಾರಿ ಕಚೇರಿ ಮುಂದೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂಬ ಸರ್ಕಾರದ ದಿಟ್ಟ ನಿರ್ಧಾರದಿಂದ ಪುರಸಭೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ.

Advertisement

ಪುರಸಭೆ ಅಧಿಕಾರಿಗಳು ಈ ಬಗ್ಗೆ ಒಂದು ವಾರದ ಹಿಂದೆ ಅಂಗಡಿ ಮಾಲಿಕರಿಗೆ ನೋಟಿಸ್‌ ಜಾರಿ ಮಾಡಿದ್ದರು. ಇದರಿಂದ ಕೆಲವರು ಕನ್ನಡ ಭಾಷೆಯ ನಾಮಫಲಕಗಳನ್ನು ಹಾಕಿದ್ದಾರೆ. ಕೆಲವರು ಹಾಕದೇ ಇರುವ ಕಾರಣಕ್ಕೆ ಪುರಸಭೆ ಅಧಿಕಾರಿಗಳು ನಗರದ 10 ರಿಂದ 12 ಕಡೆಗಳಲ್ಲಿ ದಾಳಿ ನಡೆಸಿ ಇಂಗ್ಲಿಷ್‌ ನಾಮಫಲಕ ತೆರವುಗೊಳಿಸಿದರು.

ಮುಖ್ಯಾ ಧಿಕಾರಿ ಡಾ. ಸುಂದರ ರೋಗಿ, ಆರೋಗ್ಯ ನಿರೀಕ್ಷಕ ಪಿ.ಕೆ.ಜಮಖಂಡಿ ಸೇರಿದಂತೆ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next