Advertisement

ಆಂಧ್ರಪ್ರದೇಶ : ಆರನೇ ತರಗತಿವರೆಗೆ ಆಂಗ್ಲ ಮಾಧ್ಯಮ

09:51 AM Nov 12, 2019 | Team Udayavani |

ವಿಜಯವಾಡ: ಇನ್ನು ಮುಂದೆ ಆಂಧ್ರಪ್ರದೇಶದಲ್ಲಿ ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಕಲಿಸಲಾಗುತ್ತದೆ. ಈ ಹಿಂದೆ ಹತ್ತನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಕಲಿಸಬೇಕು ಎಂದು ಹೊರಡಿಸಿದ್ದ ಆದೇಶದಲ್ಲಿ ವೈ.ಎಸ್‌.ಜಗನ್ಮೋಹನ ರೆಡ್ಡಿ ನೇತೃತ್ವದ ಸರಕಾರ ಕೊಂಚ ಬದಲಾವಣೆ ಮಾಡಿದೆ.

Advertisement

ಇದರ ಜತೆಗೆ ತೆಲುಗನ್ನು ಪ್ರಧಾನ ಭಾಷೆಯಾಗಿ ಎಲ್ಲ ತರಗತಿಗಳಿಗೆ ಕಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಎಂದು ಈ ಹಿಂದೆ ಹೊರಡಿಸಿದ್ದ ಆದೇಶಕ್ಕೆ ಶಿಕ್ಷಕರ ಸಂಘಟನೆ ಗಳಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರಕಾರ ನಿರ್ಧಾರದಲ್ಲಿ ಬದಲು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next