Advertisement
ಆರಂಭದ ಶೈಕ್ಷಣಿಕ ವರ್ಷಗಳಲ್ಲಿ ಸುಮಾರು 800ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿತಂತಹ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ 350 ವಿದ್ಯಾರ್ಥಿಗಳು ಕಲಿಯುತ್ತಿದ್ದು ಈ ಬಾರಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಂಡ ಪರಿಣಾಮವಾಗಿ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಖಾಸಗಿಯಾಗಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ್ದು ಸರಕಾರದ ಅನುದಾನದಿಂದ ಆರಂಭವಾದರೆ ಉತ್ತಮ ಎನ್ನುವುದು ಪೋಷಕರ ಅಭಿಪ್ರಾಯ.
ಆಂಗ್ಲ ಮಾಧ್ಯಮ ಆರಂಭಗೊಂಡ ಪರಿಣಾಮವಾಗಿ ಸರಕಾರಿ ಪ್ರಾಥಮಿಕ ಶಾಲೆ ಯಲ್ಲಿ ಈ ಬಾರಿ ಒಂದನೇ ತರಗತಿಗೆ ಒಂದು ವಿದ್ಯಾರ್ಥಿಯೂ ಪ್ರವೇಶಾತಿ ಪಡೆಯದೇ ಇರುವುದು ಆಶ್ಚರ್ಯ ಮೂಡಿಸಿದೆ. 137 ವರ್ಷಗಳ ಇತಿಹಾಸವಿರುವ ಕನ್ನಡ ಶಾಲೆಯಲ್ಲಿ ಕನ್ನಡ ಮಾಧ್ಯಮ ಮುಂದುವರಿಯಬೇಕು ಎನ್ನುವುದು ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಅಭಿಪ್ರಾಯ. ಕನ್ನಡ ಮಾಧ್ಯಮಕ್ಕೂ ವಿದ್ಯಾರ್ಥಿಗಳನ್ನು ಸೇರಿಸುವಲ್ಲಿ ಹೆತ್ತವರು ಹಾಗೂ ಶಾಲೆ ಪ್ರಯತ್ನಿಸಬೇಕು ಎನ್ನುವುದು ಸ್ಥಳೀಯರ ಅನಿಸಿಕೆ. ಅಂಗನವಾಡಿಗೆ ವಿದ್ಯಾರ್ಥಿಗಳು ಕಡಿಮೆ
ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಅಂಗನವಾಡಿಗಳಿಗೆ ವಿದ್ಯಾರ್ಥಿಗಳು ಕಡಿಮೆ ಯಾಗುತ್ತಿದ್ದಾರೆ ಎನ್ನುವುದು ಅಂಗನ ವಾಡಿ ಶಿಕ್ಷಕಿಯರ ಅಳಲು. ಒಂದೆಡೆ ಕಳೆದ ಮೂರು ತಿಂಗಳಿಂದ ಅಂಗನವಾಡಿ ಶಿಕ್ಷಕಿಯರಿಗೆ ವೇತನವಾಗಿಲ್ಲ. ಅಲ್ಲದೆ ಆಂಗ್ಲ ಶಿಕ್ಷಣದ ಪ್ರಭಾವದಿಂದ ಅಂಗನವಾಡಿಗೆ ವಿದ್ಯಾರ್ಥಿಗಳು ಕಡಿಮೆ ಆದರೆ ಏನು ಮಾಡುವುದು ಎಂಬ ಚಿಂತೆ ಮೂಡಿದ್ದು ಈ ಬಗ್ಗೆ ಇಲಾಖೆ ಗಮನಹರಿಸಬೇಕಾಗಿದೆ.