Advertisement

ಇಂಗ್ಲಿಷ್‌ ಬುದ್ಧಿವಂತಿಕೆಯ ಮಾನದಂಡವಲ್ಲ ಅದೊಂದು ಸಂವಹನದ ಮಾಧ್ಯಮವಷ್ಟೇ ಎಂದ ಮೋದಿ

08:17 PM Oct 19, 2022 | Team Udayavani |

ಗಾಂಧಿನಗರ: “ಇಂಗ್ಲಿಷ್‌ನ್ನು ಮನುಷ್ಯನ ಬುದ್ಧಿವಂತಿಕೆಯ ಮಾನದಂಡವಾಗಿ ನೋಡಬಾರದು. ಅದು ಸಂವಹನದ ಒಂದು ಮಾಧ್ಯಮವಷ್ಟೇ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸ್ಥಳೀಯ ಭಾಷೆಗಳ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.

Advertisement

ಗುಜರಾತ್‌ನ ಗಾಂಧಿನಗರದ ಅದಲಾಜ್‌ ನಗರದಲ್ಲಿ ರಾಜ್ಯ ಸರ್ಕಾರದ “ಮಿಶನ್‌ ಸ್ಕೂಲ್ಸ್‌ ಆಫ್ ಎಕ್ಸಲೆನ್ಸ್‌’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂಗ್ಲಿಷ್‌ ಸರಿಹೊಂದುವುದಿಲ್ಲ ಎನ್ನುವಂತಹ ಮಕ್ಕಳಿಗೆ ಸ್ಥಳೀಯ ಭಾಷೆಗಳಲ್ಲೇ ಪಾಠ ಹೇಳಿಕೊಡಬೇಕು ಎಂದು ಅವರು ಹೇಳಿದ್ದಾರೆ.

“ದೇಶದಲ್ಲಿ 5ಜಿ ಟೆಲಿಕಾಂ ವ್ಯವಸ್ಥೆಯು ಶಿಕ್ಷಣವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಇಂಗ್ಲಿಷ್‌ ಭಾಷೆಯತ್ತ ಇದ್ದ ನಮ್ಮ ಗುಲಾಮ ಮನಸ್ಥಿತಿಯನ್ನು ತೊಡೆದುಹಾಕುತ್ತದೆ’ ಎಂದು ಪ್ರಧಾನಿ ಹೇಳಿದ್ದಾರೆ.

ಆತ್ಮನಿರ್ಭರತೆಯ ಸಂಕೇತ:
ಗಾಂಧಿನಗರದಲ್ಲಿ ನಡೆಯುತ್ತಿರುವ ಡಿಫೆನ್ಸ್‌ ಎಕ್ಸ್‌ಪೋದಲ್ಲಿ ಭಾಗವಹಿಸಿದ ಪ್ರಧಾನಿ ಅವರು, ರಕ್ಷಣಾ ಇಲಾಖೆಯು ದೇಶೀ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಹೆಚ್ಚಾಗಿ ಖರೀದಿಸುತ್ತಿರುವುದು ರಕ್ಷಣಾ ಇಲಾಖೆಯಲ್ಲಿ ಆತ್ಮನಿರ್ಭರತೆಯನ್ನು ತೋರಿಸುತ್ತದೆ ಎಂದರು. 2021-22ರಲ್ಲಿ 13,000 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ರಫ್ತು ಮಾಡಿದ್ದೇವೆ. ಅದನ್ನು ಮುಂದಿನ ವರ್ಷಗಳಲ್ಲಿ 40,000 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದೂ ಅವರು ತಿಳಿಸಿದರು.

ಇದೇ ವೇಳೆ ದಕ್ಷಿಣ ಆಫ್ರಿಕಾ ಕೂಡ ಭಾರತದ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂದು ಎಕ್ಸ್‌ಪೋದಲ್ಲಿ ಭಾಗವಹಿಸಿರುವ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next