Advertisement

ಇಂಗ್ಲಿಷೇ ದೊಡ್ಡ ಕನ್‌ಫ್ಯೂಶನ್‌!

01:38 PM Dec 05, 2017 | |

ನಿನಗೆ ತಲೆಯಿದೇ ಹುಡುಗಾ, ಆದರೆ ಇಂಗ್ಲಿಷ್‌ನ್ನು ಮಾತ್ರ ನೀನು ಸರಿಯಾಗಿ ಕಲಿಯುತ್ತಿಲ್ಲ ಎಂದು ಜೂಲಿಯಾನಾ ಮಿಸ್‌ ಬೈಯುತ್ತಿದ್ದರು. ಅವರಿಗೆ ಹೇಗೆ ಉತ್ತರಿಸುವುದೆಂದು ತಿಳಿಯದೆ ನಾನು ಒದ್ದಾಡಿ ಹೋಗುತ್ತಿದ್ದೆ…

Advertisement

ಅದೇಕೋ ಗೊತ್ತಿಲ್ಲ. ವಿದ್ಯಾರ್ಥಿದೆಸೆಯಲ್ಲಿದ್ದಾಗ ಕೆಲವು ಸಬ್ಜೆಕ್ಟ್ಗಳು ಕೆಲವರಿಗೆ ಒಗ್ಗೊದಿಲ್ಲ. ನಾನೂ ಇದರಿಂದ ಹೊರತಾಗೇನಿರಲಿಲ್ಲ. ಹಲವರಂತೆ, ನನಗೂ ಇಂಗ್ಲಿಷ್‌ ಅಂದ್ರೆ ಅಷ್ಟಕ್ಕಷ್ಟೇ. ನಾನು ಓದಿದ್ದು ಬಳ್ಳಾರಿಯ ಸೇಂಟ್‌ ಮೇರೀಸ್‌ ಪ್ರಾಥಮಿಕ ಶಾಲೆ. ಅಲ್ಲಿ ಇಂಗ್ಲಿಷ್‌ನ್ನು ಅಲ್ಲಿನ ಮುಖ್ಯೋಪಾಧ್ಯಾಯಿನಿಯಾದ ಸಿಸ್ಟರ್‌ ಜೂಲಿಯಾನಾ ಅವರೇ ಕಲಿಸುತ್ತಿದ್ದರು. ಅವರು ಮಂಗಳೂರಿನವರು. ತುಂಬಾ ಒಳ್ಳೆಯವರು.

ಅವರಿಗೆ ಚೆನ್ನಾಗಿ ಇಂಗ್ಲಿಷ್‌ ಗೊತ್ತಿತ್ತು. ಆದರೆ, ಕೊಂಚ ಮುಂಗೋಪಿ. ಹೇಳಿದ್ದನ್ನು ತಕ್ಷಣಕ್ಕೆ ಅರ್ಥ ಮಾಡಿಕೊಳ್ಳದಿದ್ದರೆ ಬೈಗುಳಗಳು ಗ್ಯಾರಂಟಿ. ಇದೇ ಈ ಶಾಲೆಯಲ್ಲಿ ಇಂಗ್ಲಿಷ್‌ ಸಲುವಾಗಿ ನಾನು ಬಿದ್ದ ಪಡಿಪಾಟಲಿಗೆ ಮೂಲ ಕಾರಣ. ಇಂಗ್ಲಿಷ್‌ ಕಲಿಯುವಿಕೆಯ ಆರಂಭದಲ್ಲಿ ನನಲ್ಲಿ ಮೂಡುತ್ತಿದ್ದ ಅನುಮಾನಗಳು ಒಂದೆರಡಲ್ಲ. ಉದಾಹರಣೆಗೆ, ಕನ್ನಡದಲ್ಲಿ “ಕ’ ಉಚ್ಛಾರಣೆಗೆ ಒಂದು ನಿರ್ದಿಷ್ಟ ಅಕ್ಷರ (ಕ) ಇದೆ.

ನಾವು ಕನ್ನಡದಲ್ಲಿ ಎಲ್ಲೇ ಕ ಕಾರ ಉಪಯೋಗಿಸಿದರೂ ಅದೇ ಅಕ್ಷರ ಬರೆಯುತ್ತೇವೆ. ಆದರೆ, ಅಲ್ಲಿ ಕ ಉಚ್ಛಾರಣೆಗೆ ಬೇರೆ ಬೇರೆ ಅಕ್ಷರಗಳ ಬಳಕೆಯಿದೆ. ಕಾರ್‌ ಪದದಲ್ಲಿ “ಕ’ಕಾರಕ್ಕೆ ಇ ಬಳಸಿದರೆ, ಕೆಮಿಸ್ಟ್ರಿ ಪದದದಲ್ಲಿ ಇಜಛಿ ಬಳಸುತ್ತಾರೆ. ಇನ್ನು, ಎ, ಏ ಕಾರಗಳಿಗೆ ಉ ಅಕ್ಷರವನ್ನು ಬೇರೊಂದು ಅಕ್ಷರಕ್ಕೆ suffಜ್ಡಿ ಬಳಸಿದರೆ, ಇನ್ನೂ ಕೆಲವೊಮ್ಮೆ ಅಉ ಅಕ್ಷರಗಳನ್ನು suffಜ್ಡಿ ಆಗಿ ಬಳಸುತ್ತಾರೆ.

ಇಂಥವು ಒಂದೆರಡಲ್ಲ, ಅಸಂಖ್ಯ ಕನ್‌ಫ್ಯೂಷನ್‌ಗಳೇ ನನ್ನ ಪಾಲಿಗೆ ಇಂಗ್ಲಿಷನ್ನು ಕಬ್ಬಿಣದ ಕಡಲೆಯಾಗಿಸಿದ್ದವು. ಸಿಸ್ಟರ್‌ ಜೂಲಿಯಾನಾ ಅವರಂತೂ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಭಾರತದಲ್ಲಿ ಇನ್ನೂ ಬೇರೂರಿದ್ದ ಬ್ರಿಟಿಷರ ಛಾಯೆಯಲ್ಲೇ ಇಂಗ್ಲಿಷ್‌ ಕಲಿತಿದ್ದವರಿಂದ ಎಲ್ಲಾ ವಿದ್ಯಾರ್ಥಿಗಳೂ “ಕ್ಲಾಸಿಕ್‌’ ಇಂಗ್ಲಿಷ್‌ ಕಲಿಯಬೇಕೆಂಬುದು ಅವರ ಇಚ್ಛೆಯಾಗಿತ್ತು. ಆದರೆ, ಅವರ ಇಚ್ಛೆಯನ್ನು ಸಾಕಾರಗೊಳಿಸುವ ಶಕ್ತಿ ನನ್ನಲ್ಲಿರಲಿಲ್ಲ.

Advertisement

ನನ್ನ ಕನ್‌ಫ್ಯೂಷನ್‌ಗಳನ್ನು ಅವರಲ್ಲಿ ಕೇಳುತ್ತಿದ್ದೆನಾದರೂ ಅವರು ಹೇಳುವ ವಿವರಣೆ ನನಗೆ ಅರ್ಥವಾಗುತ್ತಿರಲಿಲ್ಲ. ಮತ್ತೂಮ್ಮೆ ಮಗದೊಮ್ಮೆ ಕೇಳಿದರೆ ಎಲ್ಲಿ ಬೈಯುತ್ತಾರೋ ಎಂಬ ಭೀತಿಯಿದ್ದಿದ್ದರಿಂದ ನಾನು ಅವರ ತರಗತಿಯಲ್ಲಿ ಮುಂದೆ ಕೂರಲೂ ಹೆದರುತ್ತಿದ್ದೆ. ಆಗೆಲ್ಲಾ ನಮ್ಮ ಕಡೆ ಈ ಮನೆ ಟ್ಯೂಷನ್‌ಗಳು ಅಷ್ಟು ಪ್ರಚಲಿತವಿಲ್ಲದಿದ್ದರಿಂದ ಇಂಗ್ಲಿಷ್‌ ಗ್ರಾಮರ್‌ ಟ್ಯೂಷನ್‌ ಹೋಗುವ ಅವಕಾಶಗಳೂ ಸಿಗಲಿಲ್ಲ.

ನನ್ನ ಈ ಅಸಹಾಯಕತೆಯನ್ನು ಅವರು ಸೋಮಾರಿತನ ಎಂದು ತಿಳಿದಂತಿತ್ತು. ನಾನು ವಿಜ್ಞಾನ, ಸಮಾಜ ಸೇರಿದಂತೆ ಉಳಿದ ಸಬ್ಜೆಕ್ಟ್ಗಳಲ್ಲಿ ಉತ್ತಮ ಅಂಕ ಗಳಿಸುತ್ತಿದ್ದುದನ್ನು ಗಮನಿಸಿದ್ದ ಅವರು, “ನಿನಗೆ ತಲೆಯಿದೆ ಹುಡುಗಾ, ಆದರೆ, ಇಂಗ್ಲಿಷನ್ನು ಮಾತ್ರ ಸರಿಯಾಗಿ ಕಲಿಯುವುದಿಲ್ಲ’ ಎಂದು ಬೈಯ್ಯುತ್ತಿದ್ದರು. ಆದರೆ, ನನ್ನ ಅಶಕ್ತತೆ ಮಾತ್ರ ನನ್ನನ್ನು ಹಿಂಡುತ್ತಿತ್ತು. ಆ ಪಡಿಪಾಟಲನ್ನು ನೆನಪಿಸಿಕೊಂಡರೆ ಈಗ ನಗು ಬರುತ್ತೆ!

* ಚೇತನ್‌ ಓ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next