Advertisement

ಆಂಗ್ಲ ಭಾಷಾ ಸಂವಹನ ತರಗತಿಗೆ ಚಾಲನೆ

03:40 AM Jul 05, 2017 | Team Udayavani |

ಬೆಳ್ತಂಗಡಿ: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಸಂವಹನಕ್ಕಾಗಿ ವಿಶೇಷ ತರಗತಿಗಳಿಗೆ ಚಾಲನೆ ನೀಡಲಾಯಿತು. ಬೆಳಾಲು ಗ್ರಂಥಾಲಯದ ಗ್ರಂಥಪಾಲಕ ಡೀಕಯ್ಯ ಗೌಡ ಕಾರ್ಯಕ್ರಮ ಉದ್ಘಾಟಿಸಿ, ವ್ಯವಹಾರಕ್ಕಾಗಿ ಆಂಗ್ಲ ಭಾಷೆ ಅನಿವಾರ್ಯ. ಆದರೆ ಆಂಗ್ಲ ಭಾಷಾ ಕಲಿಕೆಯ ನೆಪದಲ್ಲಿ ಶಿಕ್ಷಣವು ವ್ಯಾಪಾರೀಕರಣವಾಗಿರುವುದು ಮೌಲಿಕ ಶಿಕ್ಷಣದ ಕುಸಿತಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಬೆಳಾಲಿನಂತಹ ಹಳ್ಳಿ ಪ್ರದೇಶದಲ್ಲಿ ಕಲಿಸುವುದಕ್ಕೆ ವಿಶೇಷ ಪ್ರಯತ್ನ ಈ ಪ್ರೌಢಶಾಲೆಯಲ್ಲಿ ನಿರಂತರ ನಡೆಯುತ್ತಿರುವುದು ಶ್ಲಾಘನೀಯ ಎಂದವರು ತಿಳಿಸಿದರು.

Advertisement

ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕ ಜಗದೀಶ್‌ ನಿರ್ದೇಶನದಲ್ಲಿ ಕಾರ್ಯಕ್ರಮ ಜರಗಿತು. ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಆಂಗ್ಲ ಭಾಷೆಯಲ್ಲಿ ಕಿರು ಪ್ರಹಸನ ನಡೆಯಿತು. ಪವಿತ್ರಾ, ಪೌಝಿಯಾ, ದೇವಿಕಾ, ತೃಪ್ತಿ, ಶಿಲ್ಪಾ, ರಚನಾ ನಿರ್ವಹಿಸಿದರು. ಮೋಕ್ಷಾ ಸ್ವಾಗತಿಸಿ, ಅಮೃತೇಶ್‌ ವಂದಿಸಿದರು. ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next