Advertisement

ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಡವ್‌ ಇನ್‌ಸೋಲ್‌ ಇನ್ನಿಲ್ಲ

11:01 AM Aug 08, 2017 | Team Udayavani |

ಲಂಡನ್‌: ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಡವ್‌ ಇನ್‌ಸೋಲ್‌ ರವಿವಾರ ತಮ್ಮ 91ರ ಹರೆಯದಲ್ಲಿ ನಿಧನರಾದರು. ಎಸೆಕ್ಸ್‌ ಕ್ರಿಕೆಟ್‌ ಕ್ಲಬ್‌ ಈ ನಿಧನದ ಸುದ್ದಿಯನ್ನು ಪ್ರಕಟಿಸಿದೆ.  ಇನ್‌ಸೋಲ್‌ 1950-57ರ ಆವಧಿಯಲ್ಲಿ ಇಂಗ್ಲೆಂಡ್‌ ಪರ 9 ಟೆಸ್ಟ್‌ ಗಳನ್ನಾಡಿದ್ದರು. ಒಂದು ಶತಕ ಸೇರಿದಂತೆ 408 ರನ್‌ ಹೊಡೆದಿದ್ದರು. ಇದೂ ಒಳಗೊಂಡಂತೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 54 ಶತಕ ಬಾರಿಸಿದ ಹೆಗ್ಗಳಿಕೆ ಇನ್‌ಸೋಲ್‌ ಪಾಲಿಗಿದೆ.

Advertisement

1950ರ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಾಟಿಂಗಂನಲ್ಲಿ ಟೆಸ್ಟ್‌ ಕ್ಯಾಪ್‌ ಧರಿಸಿದ ಇನ್‌ಸೋಲ್‌, ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದು 21 ರನ್‌ ಮಾಡಿದ್ದರು. 1957ರಲ್ಲಿ ವಿಂಡೀಸ್‌ ವಿರುದ್ಧವೇ ಬರ್ಮಿಂಗಂನಲ್ಲಿ ಕೊನೆಯ ಟೆಸ್ಟ್‌ ಆಡಿದರು. ಅದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್‌ನಲ್ಲಿ ತಮ್ಮ ಟೆಸ್ಟ್‌ ಬಾಳ್ವೆಯ ಏಕೈಕ ಶತಕ ಹೊಡೆದಿದ್ದರು (ಅಜೇಯ 110).  ಟೆಸ್ಟ್‌ ನಿವೃತ್ತಿಯ ಬಳಿಕ ಡವ್‌ ಇನ್‌ಸೋಲ್‌ 19 ವರ್ಷ ಕಾಲ ಇಂಗ್ಲೆಂಡ್‌ ಕ್ರಿಕೆಟ್‌ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿಯೂ ದುಡಿದಿದ್ದರು. ಆರಂಭಕಾರ ಜೆಫ್ ಬಾಯ್ಕಟ್‌ ಟೆಸ್ಟ್‌ ಪಂದ್ಯವೊಂದರಲ್ಲಿ ದ್ವಿಶತಕ ಬಾರಿಸಿಯೂ ಮುಂದಿನ ಪಂದ್ಯದಿಂದ ಗೇಟ್‌ಪಾಸ್‌ ಪಡೆದದ್ದು ಇನ್‌ಸೋಲ್‌ ಕಾರ್ಯಾವಧಿಯಲ್ಲೇ ಎಂಬುದು ಉಲ್ಲೇಖನೀಯ. ಅಂದು ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

“ಡವ್‌ ಇನ್‌ಸೋಲ್‌ ಓರ್ವ ಆಮೋಘ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ಆಡಳಿತಗಾರ. ನಮ್ಮ ಕ್ಲಬ್‌ಗ ಅವರು ಸಲ್ಲಿಸಿದ ಸೇವೆ ಅಪಾರ. ಎಲ್ಲರ ಪಾಲಿಗೂ ಅವರು ಮಿಸ್ಟರ್‌ ಎಸೆಕ್ಸ್‌ ಆಗಿದ್ದರು…’ ಎಂದು ಎಸೆಕ್ಸ್‌ ಕ್ಲಬ್‌ ತನ್ನ ವೆಬ್‌ಸೈಟ್‌ನಲ್ಲಿ ಅಗಲಿದ ಕ್ರಿಕೆಟಿಗನ ಗುಣಗಾನ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next