Advertisement

England ತಂಡದ ಬಶೀರ್‌ಗೆ ಕೊನೆಗೂ ಸಿಕ್ಕಿತು ವೀಸಾ; ವಾರಾಂತ್ಯ ಭಾರತಕ್ಕೆ

12:30 AM Jan 25, 2024 | Team Udayavani |

ಹೈದರಾಬಾದ್‌: ಇಂಗ್ಲೆಂಡ್‌ ತಂಡದ ಆಫ್ಸ್ಪಿನ್ನರ್‌ ಶೋಯಿಬ್‌ ಬಶೀರ್‌ ಅವ ರಿಗೆ ಕೊನೆಗೂ ವೀಸಾ ಸಿಕ್ಕಿದೆ. ಅವರು ಈ ವಾರಾಂತ್ಯ ಭಾರತಕ್ಕೆ ಆಗ ಮಿಸಲಿದ್ದಾರೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಹೇಳಿದ್ದಾರೆ.

Advertisement

ಭಾರತ ವಿರುದ್ಧದ ಸರಣಿಗೆ ಆಯ್ಕೆ ಯಾಗಿದ್ದ ಬಶೀರ್‌, ತಂಡದೊಂದಿಗೆ ಅಬುಧಾಬಿಯಲ್ಲಿ ನಡೆದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ತಂಡದ ಎಲ್ಲ ಸದಸ್ಯರು ಜ. 21ರಂದು ಭಾರತಕ್ಕೆ ಆಗಮಿಸಿದರೆ, ವೀಸಾ ಸಿಗದ ಕಾರಣ ಬಶೀರ್‌ ಅಬುಧಾಬಿಯಲ್ಲೇ ಉಳಿಯ ಬೇಕಾಯಿತು. ಇದನ್ನು ಪರಿ ಹರಿಸಿ ಕೊಳ್ಳುವ ಸಲುವಾಗಿ ಬಶೀರ್‌ ಇಂಗ್ಲೆಂಡ್‌ಗೆ ವಾಪಸಾಗಿದ್ದರು. ಬಶೀರ್‌ ಅವರ ತಂದೆ-ತಾಯಿ ಪಾಕಿಸ್ಥಾನದವರಾದ್ದರಿಂದ ವೀಸಾ ವಿಳಂಬವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next