Advertisement

ಕುಡಿದು ಅಶಿಸ್ತು ತೋರಿದ ಇಂಗ್ಲೆಂಡ್‌ ಕ್ರಿಕೆಟಿಗ ಡಕೆಟ್‌ ಅಮಾನತು

06:55 AM Dec 10, 2017 | Team Udayavani |

ಪರ್ಥ್(ಆಸ್ಟ್ರೇಲಿಯಾ): ಇಂಗ್ಲೆಂಡ್‌ನ‌ ಪ್ರಮುಖ ಆಲ್‌ರೌಂಡರ್‌ ಬೆನ್‌ಸ್ಟೋಕ್ಸ್‌ ಬೀದಿ ಜಗಳ ಮಾಡಿ ವಿಚಾರಣೆ ಎದುರಿಸುತ್ತಿರುವುದು ನಿಮಗೆ ಗೊತ್ತಿದೆ. ಅದರ ಪರಿಣಾಮ ಅವರು ಮಹತ್ವದ ಆ್ಯಷಸ್‌ ಟೆಸ್ಟ್‌ ಸರಣಿಯನ್ನೇ ಕಳೆದುಕೊಳ್ಳಬೇಕಾಯಿತು. ಅದು ನೆನಪಿರುವ ಸಂದರ್ಭದಲ್ಲೇ ಇಂಗ್ಲೆಂಡ್‌ನ‌ ಮತ್ತೂಬ್ಬ ಬ್ಯಾಟ್ಸ್‌ಮನ್‌ ಬೆನ್‌ ಡಕೆಟ್‌ ಕುಡಿದು ಅಶಿಸ್ತು ಪ್ರದರ್ಶಿಸಿ ಅಮಾನತಿಗೊಳಗಾಗಿದ್ದಾರೆ. ಅಭ್ಯಾಸ ಪಂದ್ಯವೊಂದರಲ್ಲಿ ಆಡಲೆಂದು ಆಸ್ಟ್ರೇಲಿಯಾಕ್ಕೆ ಬಂದ ಡಕೆಟ್‌ ಗುರುವಾರ ರಾತ್ರಿ ಪರ್ಥ್ ಬಾರೊಂದರಲ್ಲಿ ಕುಡಿದು ಏನೋ ಎಡವಟ್ಟು ಮಾಡಿಕೊಂಡಿದ್ದಾರೆ. ಅದೇನೆಂದು ಇನ್ನೂ ಬಹಿರಂಗವಾಗಿಲ್ಲ. ಸದ್ಯ ವಿಚಾರಣೆಗೆ ಆದೇಶಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next