Advertisement
ದಕ್ಷಿಣ ಆಫ್ರಿಕಾ 6 ವಿಕೆಟಿಗೆ 222 ರನ್ ಪೇರಿಸಿ ಸವಾಲೊಡ್ಡಿದರೆ, ಇಂಗ್ಲೆಂಡ್ 19.1 ಓವರ್‌ಗಳಲ್ಲಿ 5 ವಿಕೆಟಿಗೆ 226 ರನ್ ಪೇರಿಸಿ ಜಯಭೇರಿ ಮೊಳಗಿಸಿತು. 5ನೇ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಮಾರ್ಗನ್ ಕೇವಲ 22 ಎಸೆತಗಳಿಂದ ಅಜೇಯ 57 ರನ್ ಬಾರಿಸಿ ಆಫ್ರಿಕನ್ನರಿಗೆ ಆಘಾತವಿಕ್ಕಿದರು. ಅವರ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಒಳಗೊಂಡಿತ್ತು.
ಮಾರ್ಗನ್ ಸಿಡಿಯುವುದಕ್ಕೂ ಮುನ್ನ ಆರಂಭಕಾರ ಜಾಸ್ ಬಟ್ಲರ್ (29 ಎಸೆತಗಳಿಂದ 57), ಜಾನಿ ಬೇರ್‌ಸ್ಟೊ (34 ಎಸೆತಗಳಿಂದ 64) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ದಕ್ಷಿಣ ಆಫ್ರಿಕಾ ಪರ ಹೆನ್ರಿಚ್ ಕ್ಲಾಸೆನ್ 33 ಎಸೆತಗಳಿಂದ 68 ರನ್ ಬಾರಿಸಿದರು.
Related Articles
ದಕ್ಷಿಣ ಆಫ್ರಿಕಾ-6 ವಿಕೆಟಿಗೆ 222 (ಕ್ಲಾಸೆನ್ 66, ಬವುಮ 49, ಡಿ ಕಾಕ್ 35, ಮಿಲ್ಲರ್ ಔಟಾಗದೆ 35, ಕರನ್ 33ಕ್ಕೆ 2, ಸ್ಟೋಕ್ಸ್ 35ಕ್ಕೆ 2). ಇಂಗ್ಲೆಂಡ್-19.1 ಓವರ್‌ಗಳಲ್ಲಿ 5 ವಿಕೆಟಿಗೆ 226 (ಬೇರ್‌ಸ್ಟೊ 64, ಬಟ್ಲರ್ 57, ಮಾರ್ಗನ್ ಔಟಾಗದೆ 57, ಎನ್‌ಗಿಡಿ 55ಕ್ಕೆ 2).
Advertisement