Advertisement
ದಿ ರೋಸ್ ಬೌಲ್ ಅಂಗಳದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಫಿಂಚ್ ಫೀಲ್ಡಿಂಗ್ ಆಯ್ಕೆ ಮಾಡಿದರು. ಬೆರಿಸ್ಟೊ ಬೇಗನೇ ಔಟಾದರೂ ಬಟ್ಲರ್ ಮತ್ತು ಮಲಾನ್ ಇಂಗ್ಲೆಂಡ್ ಗೆ ಆಧಾರವಾದರು. ಬಟ್ಲರ್ 44 ರನ್ ಗಳಿಸಿದರೆ, ಮಲಾನ್ 66 ರನ್ ಗಳಿಸಿದರು. ಆದರೆ ನಂತರ ಇಂಗ್ಲೆಂಡ್ ತಂಡ ಸತತ ವಿಕೆಟ್ ಕಳೆದುಕೊಂಡಿತು.
Related Articles
Advertisement
ಒಂದು ಹಂತದಲ್ಲಿ ಒಂಬತ್ತು ವಿಕೆಟ್ ಸಹಾಯದಿಂದ 42 ಎಸೆತದಲ್ಲಿ 48 ರನ್ ಗಳಿಸಬೇಕಾದ ಸುಲಭ ಗುರಿ ಹೊಂದಿದ್ದ ಆಸೀಸ್ ನಂತರ ನಾಟಕೀಯ ಕುಸಿತ ಕಂಡಿತು. ಸತತ ವಿಕೆಟ್ ಕಳೆದುಕೊಂಡ ಆಸೀಸ್ ಪರದಾಡಿತು. 20 ಓವರ್ ನಲ್ಲಿ 160 ರನ್ ಗಳಿಸಲಷ್ಟೇ ಗಳಿಸಲಾಯಿತು. ಇಂಗ್ಲೆಂಡ್ ಎರಡು ರನ್ ಗಳ ರೋಚಕ ಜಯ ಗಳಿಸಿತು. ಮಲಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.