Advertisement

ಇಂಗ್ಲೆಂಡ್‌ ವನಿತೆಯರ ಅಭ್ಯಾಸ ಶೀಘ್ರ

10:41 PM Jun 19, 2020 | Sriram |

ಲಂಡನ್‌: ಇದೇ ವರ್ಷ ಭಾರತ, ದಕ್ಷಿಣ ಆಫ್ರಿಕಾ ತಂಡ ಗಳನ್ನೊಳಗೊಂಡ ಏಕದಿನ ತ್ರಿಕೋನ ಸರಣಿಯ ನಿರೀಕ್ಷೆಯಲ್ಲಿರುವ ಇಂಗ್ಲೆಂಡ್‌ ವನಿತಾ ಕ್ರಿಕೆಟಿಗರು ಸೋಮವಾರದಿಂದ ಹೊರಾಂಗಣ ಅಭ್ಯಾಸ ಆರಂಭಿಸಲಿದ್ದಾರೆ. ಒಟ್ಟು 24 ಆಟಗಾರ್ತಿಯರು ಅಭ್ಯಾಸದಲ್ಲಿ ತೊಡಗಲಿದ್ದಾರೆ ಎಂದು ಇಸಿಬಿ ತಿಳಿಸಿದೆ.

Advertisement

ಭಾರತ ವನಿತಾ ತಂಡ ಈಗಾಗಲೇ ಇಂಗ್ಲೆಂಡ್‌ ಎದುರಿನ ದ್ವಿಪಕ್ಷೀಯ ಸರಣಿಗಾಗಿ ಕ್ರಿಕೆಟ್‌ ಜನಕರ ನಾಡಿಗೆ ಪಯಣಿಸಬೇಕಿತ್ತು. 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ಕೊರೊನಾದಿಂದಾಗಿ ಈ ಸರಣಿ ರದ್ದುಗೊಂಡಿತು.

ಆದರೀಗ ಇಸಿಬಿ ತ್ರಿಕೋನ ಸರಣಿ ಆಯೋಜನೆ ಬಗ್ಗೆ ಭಾರತ ಮತ್ತು ದ. ಆಫ್ರಿಕಾ ಕ್ರಿಕೆಟ್‌ ಮಂಡಳಿಗಳೊಂದಿಗೆ ಯಶಸ್ವಿ ಮಾತುಕತೆ ನಡೆಸಿದೆ. ಈ ಬೇಸಗೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿ ಪುನರಾರಂಭಗೊಳ್ಳುವ ವಿಶ್ವಾಸ ಇದೆ ಎಂದು ಇಂಗ್ಲೆಂಡ್‌ ವನಿತಾ ಕ್ರಿಕೆಟ್‌ ಮಂಡಳಿಯ ನಿರ್ದೇಶಕ ಜೊನಾಥನ್‌ ಫಿಂಚ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next