Advertisement
ಶಾನ್ ಮಸೂದ್ 151 ರನ್ ಬಾರಿಸಿ “ಮುಲ್ತಾನ್ ಕಾ ಸುಲ್ತಾನ್’ ಎನಿಸಿದರು. ಇದು 4 ವರ್ಷಗಳ ಬಳಿಕ ಮಸೂದ್ ಬಾರಿಸಿದ ಟೆಸ್ಟ್ ಶತಕವಾಗಿದೆ. 177 ಎಸೆತ ನಿಭಾಯಿಸಿದ ಪಾಕ್ ಕಪ್ತಾನ 13 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಇದು ಅವರ 5ನೇ ಶತಕ. ಅಬ್ದುಲ್ಲ ಶಫೀಕ್ ಕೂಡ 5ನೇ ಟೆಸ್ಟ್ ದಾಖಲಿಸಿದರು. ಆರಂಭಿಕನ ಗಳಿಕೆ 102 ರನ್. 184 ಎಸೆತಗಳನ್ನು ಎದುರಿಸಿ ನಿಂತ ಅವರು 10 ಬೌಂಡರಿ, 2 ಸಿಕ್ಸರ್ ಹೊಡೆದರು.ಆರಂಭಕಾರ ಸೈಮ್ ಅಯೂಬ್ (4) ಬೇಗನೇ ಔಟಾದ ಬಳಿಕ ಜತೆಗೂಡಿದ ಶಫೀಕ್-ಮಸೂದ್ 2ನೇ ವಿಕೆಟ್ ಜತೆಯಾಟದಲ್ಲಿ 253 ರನ್ ಪೇರಿಸಿದರು. ಅಂತಿಮ ಅವಧಿಯಲ್ಲಿ 3 ವಿಕೆಟ್ ಕಿತ್ತ ಇಂಗ್ಲೆಂಡ್ ಒಂದಿಷ್ಟು ಮೇಲುಗೈ ಸಾಧಿಸಿತು.