Advertisement

ಲಾರ್ಡ್ಸ್‌ ಟೆಸ್ಟ್‌: ಇಂಗ್ಲೆಂಡ್‌ ಗೆ ತಿರುಗೇಟು ನೀಡಿದ ನ್ಯೂಜಿಲ್ಯಾಂಡ್‌

11:03 PM Jun 03, 2022 | Team Udayavani |

ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಿರುಗೇಟು ನೀಡುವುದರೊಂದಿಗೆ ಇಂಗ್ಲೆಂಡ್‌ ಮೇಲುಗೈ ಯೋಜನೆ ತಲೆಕೆಳಗಾಗಿದೆ.

Advertisement

ಕಿವೀಸ್‌ನ 132 ರನ್ನಿಗೆ ಉತ್ತರವಾಗಿ ಸ್ಟೋಕ್ಸ್‌ ಪಡೆ 141ಕ್ಕೆ ಕುಸಿಯಿತು.ದ್ವಿತೀಯ ಇನ್ನಿಂಗ್ಸ್‌ನಲ್ಲಿ ಚೇತರಿಕೆಯ ಬ್ಯಾಟಿಂಗ್‌ ಕಂಡ ನ್ಯೂಜಿಲ್ಯಾಂಡ್‌, 4 ವಿಕೆಟಿಗೆ 203 ರನ್‌ ಗಳಿಸಿ ಕೊನೆಯ ಅವಧಿಯ ಆಟ ಮುಂದುವರಿಸುತ್ತಿದೆ. ಡ್ಯಾರಿಲ್‌ ಮಿಚೆಲ್‌ ಮತ್ತು ಟಾಮ್‌ ಬ್ಲಿಂಡೆಲ್‌ ಅರ್ಧ ಶತಕ ಬಾರಿಸಿ ತಂಡವನ್ನು ಆಧರಿಸಿ ನಿಂತಿದ್ದಾರೆ.

ಇಂಗ್ಲೆಂಡ್‌ ಒಂದು ಹಂತದಲ್ಲಿ ಒಂದು ವಿಕೆಟಿಗೆ 75 ರನ್‌ ಗಳಿಸಿ ಬೃಹತ್‌ ಲೀಡ್‌ ಗಳಿಸುವತ್ತ ಮುನ್ನಡೆಯುತ್ತಿತ್ತು. ಆದರೆ ಅನಂತರ ನಾಟಕೀಯ ಕುಸಿತಕ್ಕೆ ಸಿಲುಕಿತು. 7 ವಿಕೆಟಿಗೆ 116 ರನ್‌ ಗಳಿಸಿ ದಿನದಾಟ ಮುಗಿಸಿತ್ತು. ಹೀಗೆ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಮೊದಲ ದಿನದಾಟ 17 ವಿಕೆಟ್‌ ಪತನಕ್ಕೆ ಸಾಕ್ಷಿಯಾಯಿತು.

ನ್ಯೂಜಿಲ್ಯಾಂಡ್‌ ಪರ ಟಿಮ್‌ ಸೌಥಿ 55ಕ್ಕೆ 4, ಟ್ರೆಂಟ್‌ ಬೌಲ್ಟ್ 21ಕ್ಕೆ 3, ಕೈಲ್‌ ಜೇಮಿಸನ್‌ 20ಕ್ಕೆ 2 ವಿಕೆಟ್‌ ಕೆಡವಿದರು. ಇಂಗ್ಲೆಂಡ್‌ ಸರದಿಯಲ್ಲಿ ಓಪನರ್‌ಗಳಾದ ಜಾಕ್‌ ಕ್ರಾಲಿ (43), ಅಲೆಕ್ಸ್‌ ಲೀಸ್‌ (25) ಹೊರತುಪಡಿಸಿ ಉಳಿದವರ್ಯಾರೂ ಮಿಂಚಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next