Advertisement
ಆತಿಥೇಯ ಹಾಗೂ ವಿಶ್ವ ಚಾಂಪಿ ಯನ್ ಖ್ಯಾತಿಯ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಅನೇಕ ನಿರೀಕ್ಷೆ ಹಾಗೂ ಕುತೂಹಲವನ್ನು ಹುಟ್ಟುಹಾಕಿದೆ. ಭಾರತ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ಸೋತ ಕಾರಣ ಸೇಡಿನ ಅವಕಾಶವೂ ಇದೆ.
17 ವರ್ಷದ ಶಫಾಲಿ 96 ಹಾಗೂ 63 ರನ್ ಬಾರಿಸಿ ಇಂಗ್ಲೆಂಡ್ ಎದುರಿನ ಪದಾರ್ಪಣ ಟೆಸ್ಟ್ ಪಂದ್ಯದಲ್ಲೇ ತನ್ನ ಬ್ಯಾಟಿಂಗ್ ತಾಕತ್ತು ಏನು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತಾನು ಎಲ್ಲ ಮಾದರಿಯ ಪಂದ್ಯಗಳಿಗೂ ಸೈ ಎಂದು ಸಾರಿದ್ದಾರೆ. ರವಿವಾರ ಶಫಾಲಿಗೆ ಏಕದಿನ ಪದಾರ್ಪಣೆಯ ಗಳಿಗೆ ಖಂಡಿತವಾಗಿಯೂ ಕೂಡಿಬರಲಿದೆ.
Related Articles
Advertisement
ಉಳಿದಂತೆ ಪೂನಂ ರಾವುತ್, ಮಿಥಾಲಿ, ಕೌರ್, ಆಲ್‌ರೌಂಡರ್ ದೀಪ್ತಿ ಶರ್ಮ 6ನೇ ಕ್ರಮಾಂಕದ ವರೆಗಿನ ಸ್ಥಾನವನ್ನು ತುಂಬುವುದು ಖಚಿತ. ದೇಶಿ ಏಕದಿನ ಕ್ರಿಕೆಟ್‌ನಲ್ಲಿ ಬಿಗ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಕೀಪರ್ ಇಂದ್ರಾಣಿ ರಾಯ್ ಕೂಡ ರೇಸ್‌ನಲ್ಲಿದ್ದಾರೆ. ಅವರು ತನಿಯಾ ಭಾಟಿಯ ಜತೆ ಪೈಪೋಟಿ ನಡೆಸಬೇಕಿದೆ. ಜೂಲನ್, ಶಿಖಾ, ಪೂಜಾ, ಅರುಂಧತಿ ರೆಡ್ಡಿ ಸ್ಪೆಷಲಿಸ್ಟ್ ಬೌಲರ್‌ಗಳಾಗಿ ದಾಳಿಗಿಳಿಯುವ ಸಿದ್ಧತೆಯಲ್ಲಿದ್ದಾರೆ.
ಇಂಗ್ಲೆಂಡ್ ಹೆಚ್ಚು ಬಲಿಷ್ಠಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್ ಹೆಚ್ಚು ಬಲಿಷ್ಠ ತಂಡ. ತವರಲ್ಲಿ ಆಡುವ ಲಾಭವೂ ಇದೆ. ಟೆಸ್ಟ್‌ನಲ್ಲಿ ಮಿಂಚಿದ ಸೋಫಿಯಾ ಡಂಕ್ಲಿ ಒನ್‌ಡೇ ಕ್ಯಾಪ್ ಧರಿಸುವ ಕ್ಷಣಗಣನೆಯಲ್ಲಿದ್ದಾರೆ. ಬ್ಯೂಮಂಟ್, ನೈಟ್ ಮತ್ತು ಶಿವರ್ ಹೆಚ್ಚು ಅಪಾಯಕಾರಿಗಳು.
ಭಾರತದ ವನಿತಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಭರ್ತಿ 22 ವರ್ಷ ಪೂರೈಸಿದರು. 1999ರ ಜೂನ್ 26ರಂದು ಐರ್ಲೆಂಡ್ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅವರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ ಲಭಿಸಿತ್ತು. ರವಿವಾರ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.
ಮಿಲ್ಟನ್ ಕೇಯ್ನನಲ್ಲಿ ಆಡಲಾದ ತನ್ನ ಚೊಚ್ಚಲ ಪಂದ್ಯದಲ್ಲೇ ಮಿಥಾಲಿ ಅಜೇಯ 114 ರನ್ ಬಾರಿಸಿ ಭವ್ಯ ಭವಿಷ್ಯದ ಮುನ್ಸೂಚನೆ ನೀಡಿದ್ದರು. ಇದೀಗ ನಿಜವಾಗಿದೆ. ಸಚಿನ್ ತೆಂಡುಲ್ಕರ್ ಬಳಿಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದೀರ್ಘ ಅವಧಿಯನ್ನು ಕಳೆದ ಹಿರಿಮೆ ಮಿಥಾಲಿ ರಾಜ್ ಅವರದು. ಸಚಿನ್ 22 ವರ್ಷ, 91 ದಿನಗಳ ಕಾಲ ಏಕದಿನ ಕ್ರಿಕೆಟ್‌ನಲ್ಲಿದ್ದರು. ಈ ದಾಖಲೆಯನ್ನು ಮುರಿಯುವ ಅವಕಾಶವೂ ಮಿಥಾಲಿ ಮುಂದಿದೆ. ರನ್ ದಾಖಲೆಯತ್ತ…
ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 10,131 ರನ್ ಪೇರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಲ್ಲಿಯೂ ಅಗ್ರಸ್ಥಾನ ಅಲಂಕರಿಸುವ ಅವಕಾಶ ಮಿಥಾಲಿ ಮುಂದಿದೆ. ಇದಕ್ಕೆ ಬೇಕಿರುವುದು 143 ರನ್ ಮಾತ್ರ. ಸದ್ಯ 10,273 ರನ್ ಗಳಿಸಿರುವ ಚಾರ್ಲೋಟ್ ಎಡ್ವರ್ಡ್ಸ್ ಮೊದಲ ಸ್ಥಾನದಲ್ಲಿದ್ದಾರೆ.