Advertisement

ಓವಲ್‌ ಟೆಸ್ಟ್‌ ಪಂದ್ಯ : ಮುನ್ನಡೆ ಸಾಧಿಸಿದ ಇಂಗ್ಲೆಂಡ್‌

11:21 PM Sep 03, 2021 | Team Udayavani |

ಲಂಡನ್‌ : ಭಾರತದ 191 ರನ್ನುಗಳ ಸಾಮಾನ್ಯ ಮೊತ್ತವನ್ನು ಹಿಂದಿಕ್ಕಿದ ಇಂಗ್ಲೆಂಡ್‌ ಓವಲ್‌ ಟೆಸ್ಟ್‌ ಪಂದ್ಯದ ದ್ವಿತೀಯ ದಿನ 290ಕ್ಕೆ ಆಲೌಟ್‌ ಆಗಿದ್ದು, 99 ರನ್‌ಗಳ ಮೊದಲ ಇನ್ನಿಂಗ್ಸ್‌ ಲೀಡ್‌ ಗಳಿಸುವಲ್ಲಿ ಯಶಸ್ವಿಯಾಗಿದೆ.

Advertisement

ಆರಂಭದಲ್ಲಿ ತಿರುಗೇಟು ನೀಡಿದ ಭಾರತದ ಬೌಲರ್‌ಗಳು ಆತಿಥೇಯರಿಗೆ ಬಿಸಿ ಮುಟ್ಟಿಸತೊಡಗಿದರು. ಉಮೇಶ್‌ ಯಾದವ್‌ ಮತ್ತು ಬುಮ್ರಾ ಸೇರಿಕೊಂಡು 62 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಉರುಳಿಸಿದರು. ಆಗ ಕೊಹ್ಲಿ ಪಡೆಗೆ ಮುನ್ನಡೆಯ ಸಾಧ್ಯತೆಯೊಂದು ಗೋಚರಿಸಿತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಓಲೀ ಪೋಪ್‌ (81) ಬೇರೂರಿ ನಿಂತು ಇಂಗ್ಲೆಂಡ್‌ ಸರದಿಯನ್ನು ಬೆಳೆಸತೊಡಗಿದರು. ಅವರಿಗೆ ಬೇರ್‌ಸ್ಟೊ (37), ಮೊಯಿನ್‌ ಅಲಿ (35) ಉತ್ತಮ ಬೆಂಬಲ ನೀಡಿದರು.

ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್‌ 3ಕ್ಕೆ 53 ರನ್‌ ಮಾಡಿತ್ತು. ಇದರಲ್ಲಿ ಅಪಾಯಕಾರಿ ಜೋ ರೂಟ್‌ (21) ವಿಕೆಟ್‌ ಕೂಡ ಸೇರಿತ್ತು. ಇದೇ ಮೊತ್ತಕ್ಕೆ ನೈಟ್‌ ವಾಚ್‌ಮನ್‌ ಓವರ್ಟನ್‌ (1) ವಾಪಸಾದರು. ಮಲಾನ್‌ 31ರ ಗಡಿ ದಾಟಲಿಲ್ಲ. ಈ ಎರಡೂ ವಿಕೆಟ್‌ ಉಮೇಶ್‌ ಯಾದವ್‌ ಪಾಲಾಯಿತು. ಪೋಪ್‌-ಬೇರ್‌ಸ್ಟೊ 89 ರನ್‌ ಜತೆಯಾಟ ನಡೆಸಿ ಆಸರೆ ಒದಗಿಸಿದರು. ಈ ಜೋಡಿಯನ್ನು ಸಿರಾಜ್‌ ಬೇರ್ಪಡಿಸಿದರು. ಅಲಿ ವಿಕೆಟ್‌ ಜಡೇಜ ಕಿತ್ತರು. ಕೊನೆಯಲ್ಲಿ ವೋಕ್ಸ್‌ (50) ಲೀಡ್‌ ಇನ್ನಷ್ಟು ಹೆಚ್ಚಿಸಿದರು.

ಇದನ್ನೂ ಓದಿ :ಭಾರತ ಟೇಬಲ್‌ ಟೆನಿಸ್‌ ತಂಡದ ಕೋಚ್‌ ರಾಯ್‌ ವಿರುದ್ಧ ಮಣಿಕಾ ಬಾತ್ರಾ ಫಿಕ್ಸಿಂಗ್‌ ಆರೋಪ!

Advertisement

Udayavani is now on Telegram. Click here to join our channel and stay updated with the latest news.

Next