Advertisement

ಮೂರು ಟೆಸ್ಟ್‌ ಪಂದ್ಯ: ಪಾಕಿಸ್ಥಾನ-ಇಂಗ್ಲೆಂಡ್‌ ಟೆಸ್ಟ್‌ ತಾಣ ಪ್ರಕಟ

11:23 PM Aug 22, 2022 | Team Udayavani |

ಕರಾಚಿ: ವರ್ಷಾಂತ್ಯ ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಪಾಕಿಸ್ಥಾನದಲ್ಲಿ ಮೂರು ಟೆಸ್ಟ್‌ ಪಂದ್ಯಗಳನ್ನಾಡಲಿದ್ದು, ಇವುಗಳ ತಾಣವನ್ನು ಪಿಸಿಬಿ ಸೋಮವಾರ ಪ್ರಕಟಿಸಿದೆ.

Advertisement

ಟಿ20 ವಿಶ್ವಕಪ್‌ ಬಳಿಕ ಟೆಸ್ಟ್‌ ಸರಣಿ ನಡೆಯಲಿದೆ. ಮೊದಲ ಟೆಸ್ಟ್‌ ತಾಣ ರಾವಲ್ಪಿಂಡಿ (ಡಿ. 1-5). ದ್ವಿತೀಯ ಟೆಸ್ಟ್‌ ಮುಲ್ತಾನ್‌ನಲ್ಲಿ (ಡಿ. 9-13) ಮತ್ತು ಅಂತಿಮ ಟೆಸ್ಟ್‌ ಕರಾಚಿಯಲ್ಲಿ (ಡಿ. 17-21) ನಡೆಯಲಿದೆ.

ಮೂಲ ವೇಳಾಪಟ್ಟಿಯಂತೆ ಈ ಸರಣಿ ಕಳೆದ ವರ್ಷ ನಡೆಯಬೇಕಿತ್ತು. ಆದರೆ ಇಂಗ್ಲೆಂಡ್‌ ತಂಡ ಪಾಕಿಸ್ಥಾನಕ್ಕೆ ತೆರಳಲು ಹಿಂದೇಟು ಹಾಕಿತ್ತು. ಈ ವರ್ಷ ಆಸ್ಟ್ರೇಲಿಯ ತಂಡ ಪಾಕಿಸ್ಥಾನಕ್ಕೆ ಬಂದು ಸರಣಿ ಆಡಿದ ಬಳಿಕ ಇಂಗ್ಲೆಂಡ್‌ ಕೂಡ ಇಲ್ಲಿಗೆ ಬರಲು ಮುಂದಾಯಿತು.

Advertisement

Udayavani is now on Telegram. Click here to join our channel and stay updated with the latest news.

Next