ಕಾರ್ಡಿಫ್: ನ್ಯೂಜಿಲ್ಯಾಂಡಿಗೆ 87 ರನ್ ಸೋಲುಣಿಸಿದ ಆತಿಥೇಯ ಇಂಗ್ಲೆಂಡ್ “ಎ’ ವಿಭಾಗದಿಂದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲಿಗೆ ಲಗ್ಗೆ ಇರಿಸಿದೆ.
ಮಂಗಳವಾರ ಕಾರ್ಡಿಫ್ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ 49.3 ಓವರ್‌ಗಳಲ್ಲಿ 310 ರನ್ನಿಗೆ ಆಲೌಟಾದರೆ, ನ್ಯೂಜಿಲ್ಯಾಂಡ್ 44.3 ಓವರ್‌ಗಳಲ್ಲಿ 223ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಇದು ಇಂಗ್ಲೆಂಡಿಗೆ ಒಲಿದ ಸತತ 2ನೇ ಜಯ. ಮೊದಲ ಪಂದ್ಯದಲ್ಲಿ ಬಾಂಗ್ಲಾವನ್ನು ಮಣಿಸಿತ್ತು.
ಇಂಗ್ಲೆಂಡ್ ಆರಂಭಕಾರ ಜಾಸನ್ ರಾಯ್ (13) ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ಕೋರ್ 37 ರನ್ ಆದಾಗ ಮಿಲೆ° ಈ ವಿಕೆಟ್ ಹಾರಿಸಿದರು. ಅನಂತರ ಜತೆಯಾದ ಅಲೆಕ್ಸ್ ಹೇಲ್ಸ್ (56) ಮತ್ತು ಜೋ ರೂಟ್ (64) ಅಮೋಘ ಆಟವಾಡಿ ತಂಡದ ಮೊತ್ತವನ್ನು 118ಕ್ಕೆ ಏರಿಸಿದರು. ಈ ಹಂತದಲ್ಲಿ ಹೇಲ್ಸ್ ಮಿಲೆ°ಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. 62 ಎಸೆತ ಎದುರಿಸಿದ ಹೇಲ್ಸ್ 3 ಬೌಂಡರಿ, 2 ಸಿಕ್ಸರ್ ಸೇರಿದಂತೆ 64 ರನ್ ಬಾರಿಸಿದರು. ನಾಯಕ ಎವೋನ್ ಮಾರ್ಗನ್ (13) ಹೆಚ್ಚು ಹೊತ್ತು ನಿಲ್ಲಲಿಲ್ಲ. ರೂಟ್ 188ರ ಮೊತ್ತದಲ್ಲಿ 4ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ರೂಟ್ ಅವರ 64 ರನ್ 65 ಎಸೆತಗಳಲ್ಲಿ ಬಂತು.
ಮಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಜಾಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿ ಸುವ ಮೂಲಕ ತಂಡ ದೊಡ್ಡ ಮೊತ್ತ ದಾಖಲಿಸಲು ಕಾರಣರಾದರು. ಸ್ಟೋಕ್ಸ್ 48, ಬಟ್ಲರ್ ಅಜೇಯ 61 ರನ್ ಬಾರಿಸಿದರು. ಬಟ್ಲರ್ ಅವರ 48 ಎಸೆತಗಳ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ, 2 ಸಿಕ್ಸರ್ ಸೇರಿತ್ತು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-49.3 ಓವರ್‌ಗಳಲ್ಲಿ 310 (ರೂಟ್ 64, ಬಟ್ಲರ್ ಅಜೇಯ 61, ಹೇಲ್ಸ್ 56, ಸ್ಟೋಕ್ಸ್ 48, ಆ್ಯಂಡರ್ಸನ್ 55ಕ್ಕೆ 3, ಆ್ಯಡಂ ಮಿಲೆ° 79ಕ್ಕೆ 3). ನ್ಯೂಜಿಲ್ಯಾಂಡ್-44.3 ಓವರ್‌ಗಳಲ್ಲಿ 223 (ವಿಲಿಯಮ್ಸನ್ 87, ಟಯ್ಲರ್ 39, ಗಪ್ಟಿಲ್ 27, ಪ್ಲಂಕೆಟ್ 55ಕ್ಕೆ 4, ಬಾಲ್ 31ಕ್ಕೆ 2, ರಶೀದ್ 47ಕ್ಕೆ 2).