Advertisement

ವೈರಸ್‌ ತಡೆಗೆ ಮನೆಯಲ್ಲೇ ಇರಿ: ಬ್ರಿಟನ್‌ ನಾಗರಿಕರಿಗೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಪತ್ರ

09:39 AM Mar 31, 2020 | Hari Prasad |

ಮಾರಕ ಕೋವಿಡ್ 19 ವೈರಸ್ ಸೋಂಕು ತಡೆಗೆ ನಾವು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ನಿಮಗೆ ತಿಳಿಸಲೆಂದು ಈ ಪತ್ರ ಬರೆಯುತ್ತಿದ್ದೇನೆ. ಕೆಲವೇ ವಾರಗಳ ಅವಧಿಯಲ್ಲಿ ದೇಶದ ಜನಜೀವನ ನಾಟಕೀಯ ರೀತಿಯಲ್ಲಿ ಬದಲಾಗಿದೆ. ಕೋವಿಡ್ 19 ವೈರಾಣುವಿನ ಗಾಢ ಪರಿಣಾಮ ನಮ್ಮ ಮೇಲೆ ಮಾತ್ರವಲ್ಲ, ನಮ್ಮ ಪ್ರೀತಿಪಾತ್ರರು ಮತ್ತು ಸಮುದಾಯದ ಮೇಲೂ ಆಗಿದೆ.

Advertisement

ಈ ಅನಿರೀಕ್ಷಿತ ಅಡ್ಡಿಯಿಂದಾಗಿ ನಿಮ್ಮೆಲ್ಲರ ಜೀವನ, ವ್ಯವಹಾರಗಳು ಮತ್ತು ಉದ್ಯೋಗಗಳಿಗೆ ಏನೆಲ್ಲಾ ತೊಂದರೆಯಾಗಿದೆೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ಆದರೆ, ಒಂದು ಸರಳ ಕಾರಣಕ್ಕಾಗಿ ನಾವೀಗ ಕೈಗೊಂಡಿರುವ ಕ್ರಮಗಳು ಅತ್ಯಂತ ಅನಿವಾರ್ಯ.

ಅಸಂಖ್ಯ ಜನರು ಏಕಕಾಲಕ್ಕೆ ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಎನ್‌ಹೆಚ್‌ಎಸ್‌ನಿಂದ ಕಷ್ಟಸಾಧ್ಯ. ಇದು ಹಲವರ ಜೀವಕ್ಕೆ ಮುಳುವಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಜೀವಗಳನ್ನು ಉಳಿಸುವ ದೃಷ್ಟಿಯಿಂದ ವೈರಸ್‌ ಹರಡುವಿಕೆಯನ್ನು ನಾವು ನಿಯಂತ್ರಿಸಬೇಕು ಮತ್ತು ಆ ಮೂಲಕ ಸೋಂಕಿಗೆ ತುತ್ತಾಗುವವರ ಸಂಖ್ಯೆ ತಗ್ಗಿಸಲೇಬೇಕು. ಹಾಗಾಗಿ ನಾವು ನಿಮಗೆ ಒಂದು ಸರಳ ಸೂಚನೆ ನೀಡುತ್ತಿದ್ದೇವೆ- ಮನೆಯಲ್ಲೇ ಇರಿ, ಮನೆ ಬಿಟ್ಟು ಹೊರಬರಬೇಡಿ.

ನಿಮ್ಮ ಮನೆಯಲ್ಲಿ ವಾಸವಿಲ್ಲದೇ ಇರುವ ಸಂಬಂಧಿಗಳು ಅಥವಾ ಸ್ನೇಹಿತರನ್ನು ನೀವು ಭೇಟಿ ಆಗಲೇಬೇಡಿ. ಆಹಾರ ಮತ್ತು ಔಷಧ ಖರೀದಿಸಲು ಮತ್ತು ವೈದ್ಯಕೀಯ ಅಗತ್ಯ ಸೇರಿ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನೀವು ಮನೆಯಿಂದ ಹೊರ ಹೋಗ ಬೇಕು. ಕೆಲಸ ಮಾಡುವುದಕ್ಕಾಗಿ ನೀವು ಪ್ರಯಾಣಿಸಬಹುದು ಆದರೆ, ದಯವಿಟ್ಟು ಮನೆಯಿಂದಲೇ ಕೆಲಸ ಮಾಡಿ. ಒಂದೊಮ್ಮೆ ನೀವು ಮನೆಯಿಂದ ಹೊರಬಂದರೂ ಇತರೆ ವ್ಯಕ್ತಿಗಳಿಂದ ಕನಿಷ್ಠ ಎರಡು ಮೀಟರ್‌ ಅಂತರ ಕಾಯ್ದುಕೊಳ್ಳಲು ಮರೆಯಬೇಡಿ.

ಈ ನಿಯಮಗಳ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂ ಸುವ ಸಾರ್ವಜನಿಕರಿಗೆ ಪೊಲೀಸರು ದಂಡ ವಿಧಿಸುತ್ತಾರೆ ಮತ್ತು ಗುಂಪುಗಳನ್ನು ಚದುರಿಸುತ್ತಾರೆ. ಈ ಪರಿಸ್ಥಿತಿಯಿಂದ ನಿಮಗೆ ಉಂಟಾಗಬಹುದಾದ ಆರ್ಥಿಕ ಸಮಸ್ಯೆ ಬಗ್ಗೆ ಬಹಳಷ್ಟು ಮಂದಿ ಚಿಂತಾಕ್ರಾಂತರಾಗಿದ್ದೀರಿ ಎಂಬುದು ನನಗೆ ಗೊತ್ತು. ಆದರೆ, ಎಲ್ಲರ ಹಸಿವು ನೀಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರಕಾರ ಸಿದ್ಧವಿದೆ ಎಂಬ ಭರವಸೆ ನೀಡುತ್ತೇನೆ.

Advertisement

ಸೋಂಕು ನಿಯಂತ್ರಣಕ್ಕೆ ಆರಂಭದಿಂದಲೂ ಅಗತ್ಯವಿದ್ದ ಎಲ್ಲ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಹಾಗೇ, ಮುಂದೆ ಪರಿಸ್ಥಿತಿಗೆ ಅನುಗುಣವಾಗಿ ತಜ್ಞರು, ವಿಜ್ಞಾನಿಗಳು ನೀಡುವ ಸಲಹೆಯಂತೆ ಎಂತಹ ಕಠಿಣ ನಿರ್ಧಾರವನ್ನಾದರೂ ಕೈಗೊಳ್ಳಲು ಸಿದ್ಧರಾಗಿದ್ದೇವೆ.

ವೈರಸ್‌ನ ಪರಿಣಾಮ ತಗ್ಗಿಸಲು ಹೋರಾಡುತ್ತಿರುವ ಎಲ್ಲರಿಗೂ, ವಿಶೇಷವಾಗಿ ಎನ್‌ಎಚ್‌ಎಸ್‌ ಸಿಬಂದಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ದಯವಿಟ್ಟು ಮನೆಯಲ್ಲೇ ಇರಿ, ಜೀವಗಳನ್ನು ರಕ್ಷಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next