Advertisement

ಟಿ20 ಬಳಿಕ 100 ಎಸೆತಗಳ ಕ್ರಿಕೆಟ್‌!

06:00 AM Apr 21, 2018 | |

ಲಂಡನ್‌: ಈಗ ಕ್ರಿಕೆಟ್‌ ಜಗತ್ತಿನಲ್ಲಿ ಟಿ20 ಕ್ರಿಕೆಟ್‌ ಹವಾ ಚಾಲ್ತಿಯಲ್ಲಿದೆ. ಇದೇ ಹೊತ್ತಿನಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಒಂದು ಕ್ರಾಂತಿಕಾರಕ ಘೋಷಣೆ ಮಾಡಿದೆ. ಟಿ20ಗಿಂತ ಕ್ರಿಕೆಟನ್ನು ಕಿರಿದು ಮಾಡಿ 100 ಎಸೆತಗಳ ಕ್ರಿಕೆಟ್‌ ನಡೆಸುವುದಾಗಿ ಪ್ರಕಟಿಸಿದೆ. 2020ರಲ್ಲಿ ಇದರ ಮೊದಲ ಆವೃತ್ತಿ ನಡೆಯಲಿದೆ.

Advertisement

ಇಲ್ಲಿನ ಪ್ರತಿ ಪಂದ್ಯದಲ್ಲಿ ತಂಡವೊಂದರ ಇನ್ನಿಂಗ್ಸ್‌ 100 ಎಸೆತಕ್ಕೆ ಮುಕ್ತಾಯವಾಗುತ್ತದೆ. ಅಂದರೆ ಪ್ರಸ್ತುತ ಟಿ20ಯಲ್ಲಿ  120 ಎಸೆತಗಳಿದ್ದರೆ, ಇಲ್ಲಿ ಬರೀ 100 ಎಸೆತವಿರುತ್ತದೆ.

15 ಓವರ್‌: ಒಂದು ಇನ್ನಿಂಗ್ಸ್‌ನಲ್ಲಿ ಎಂದಿನಂತೆ ತಲಾ ಆರು ಎಸೆತಗಳಿರುವ 15 ಓವರ್‌ ಇರುತ್ತದೆ.

10 ಎಸೆತಗಳ ವೈಲ್ಡ್‌ ಕಾರ್ಡ್‌ ಓವರ್‌: ವಿಶೇಷವೆಂದರೆ ಇನ್ನಿಂಗ್ಸ್‌ವೊಂದರಲ್ಲಿ ಒಂದು ವೈಲ್ಡ್‌ ಕಾರ್ಡ್‌ ಓವರ್‌ ಇರುತ್ತದೆ. ಇಲ್ಲಿ 10 ಎಸೆತಗಳನ್ನು ಮಾಡಲಾಗುತ್ತದೆ. ಇದನ್ನು ತಂಡದ ನಾಯಕ ತನ್ನ ವಿವೇಚನೆಗನುಗುಣವಾಗಿ ಪಂದ್ಯದ ಯಾವ ಹಂತದಲ್ಲಾದರೂ ಬಳಸಬಹುದು.

2020ರ ಆ. 4ರಿಂದ 30ರ ತನಕ ಈ ಪಂದ್ಯಾವಳಿ ನಡೆಯಲಿದ್ದು, ಪುರುಷ ಮತ್ತು ಮಹಿಳೆಯರ ತಲಾ 8 ತಂಡಗಳು ಭಾಗವಹಿಸುತ್ತವೆ.

Advertisement

ನೇರ ಪ್ರಸಾರದ ಹಕ್ಕು: 2020ರಿಂದ 2024ರವರೆಗೆ ಒಟ್ಟು ಐದು ವರ್ಷಗಳ ಅವಧಿಗೆ 11 ಸಾವಿರ ಕೋಟಿ ರೂ. ನೀಡಿ ನೇರ ಪ್ರಸಾರದ ಹಕ್ಕನ್ನು ಪಡೆಯಲಾಗಿದೆ. ಬಿಬಿಸಿ, ಸ್ಕೈನ್ಪೋರ್ಟ್ಸ್ನಲ್ಲಿ ನೇರಪ್ರಸಾರವಿರಲಿದೆ.

ಟಿ20 ಕ್ರಿಕೆಟ್‌ ಪಂದ್ಯವೊಂದರ ಅವಧಿ 3.30 ಗಂಟೆ. 100 ಎಸೆತಗಳ ಈ ಪಂದ್ಯದಲ್ಲಿ 40 ನಿಮಿಷ ಕಡಿಮೆಯಾಗಿ 3 ಗಂಟೆಗಿಂತ ಮುನ್ನವೇ ಪಂದ್ಯ ಮುಗಿಯುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next