Advertisement

ಇಂಗ್ಲೆಂಡ್‌ ಕೀಪರ್‌ ಸಾರಾ ಟೇಲರ್‌ ನಿವೃತ್ತಿ

09:54 AM Sep 29, 2019 | keerthan |

ಲಂಡನ್‌: ಇಂಗ್ಲೆಂಡ್‌ ವನಿತಾ ಕ್ರಿಕೆಟ್‌ ತಂಡದ ಅನುಭವಿ ಆಟಗಾರ್ತಿ ಹಾಗೂ ವಿಕೆಟ್‌ ಕೀಪರ್‌ ಸಾರಾ ಟೇಲರ್‌ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.

Advertisement

“ಇದೊಂದು ಕಠಿನ, ಆದರೆ ಸೂಕ್ತ ನಿರ್ಧಾರ. ನನ್ನ ದೇಹಕ್ಕೆ ವಯಸ್ಸಾಗುತ್ತಿದೆ. ನನ್ನ ಈ ಪಯಣದ ಯಶಸ್ಸಿನಲ್ಲಿ ಪಾಲುದಾರರಾದ ಇಸಿಬಿಗೆ, ಅಂದಿನ-ಇಂದಿನ ಕಾಲಘಟ್ಟದ ಸಹ ಆಟಗಾರ್ತಿಯರಿಗೆ, ಪ್ರೋತ್ಸಾಹ ನೀಡುತ್ತಲೇ ಬಂದ ಸ್ನೇಹಿತರಿಗೆ, ಕುಟುಂಬದವರಿಗೆಲ್ಲ ಕೃತಜ್ಞತೆಗಳು’ ಎಂದು ಸಾರಾ ಹೇಳಿದರು.

30ರ ಹರೆಯದ ಸಾರಾ ಟೇಲರ್‌ 2006ರಲ್ಲಿ ಇಂಗ್ಲೆಂಡ್‌ ಪರ ಆಡಲಾರಂಭಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,533 ರನ್‌ ಪೇರಿಸಿದ್ದಾರೆ. ಇದು ಇಂಗ್ಲೆಂಡಿನ 2ನೇ ಅತ್ಯುತ್ತಮ ಸಾಧನೆಯಾಗಿದೆ. ಕೀಪಿಂಗ್‌ನಲ್ಲಿ 232 ವಿಕೆಟ್‌ ಪತನಕ್ಕೆ ಕಾರಣವಾಗಿದ್ದು, ಇದು ವನಿತಾ ಕ್ರಿಕೆಟಿನ ದಾಖಲೆಯಾಗಿದೆ.

10 ಟೆಸ್ಟ್‌, 126 ಏಕದಿನ ಹಾಗೂ 90 ಟಿ20 ಪಂದ್ಯಗಳಲ್ಲಿ ಸಾರಾ ಟೇಲರ್‌ ಇಂಗ್ಲೆಂಡನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲಿ 7 ಶತಕ ಬಾರಿಸಿದ್ದು, 147 ರನ್‌ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next