Advertisement

‘ನಾನು  ಕೋವಿಡ್ 19 ವೈರಸ್‌ನಿಂದ  ಪಾರಾದೆ…!’; ಈ ಪತ್ರಕರ್ತೆಯ ಅನುಭವ ಕೇಳಿ!

10:12 AM Apr 01, 2020 | Hari Prasad |

ಲಂಡನ್‌: ‘ನಾನು ಕೋವಿಡ್ 19 ವೈರಸ್ ನಿಂದ ಬದುಕುಳಿದೆ… ‘ ಇದು ಯುಕೆಯ 28 ವರ್ಷದ ಪತ್ರಕರ್ತೆ ಟೋಬಿ ಅಕಿಂಗ್‌ಬೇಡ್‌ ಟ್ವೀಟ್‌ ಮಾಡಿದ್ದಾರೆ. ಕೋವಿಡ್ 19 ವೈರಸ್ ಹರಡಿದ್ದರಿಂದ ಟೋಬಿ ಅಕಿಂಗ್‌ಬೇಡ್‌ ಅವರು ಅನಾರೋಗ್ಯಕ್ಕೆ  ತುತ್ತಾಗಿ, ಅವರ ಜೀವನದ ಹಲವು ದಿನಗಳನ್ನು ನೋವಿನಿಂದಲೇ  ಕಳೆದಿದ್ದಾರೆ. ಆ ಕುರಿತು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಟೋಬಿ ಅಕಿಂಗ್‌ಬೇಡ್‌, ಹೇಳುವುದು ಹೀಗೆ.

Advertisement

‘ನಾನು ಕೋವಿಡ್ 19 ವೈರಸ್ ನಿಂದ ಬದುಕಿಳಿದೆ.  ಸುಮಾರು 2 ವಾರಗಳ ಮನೆಯಲ್ಲಿಯೇ ಕಾಲ ಕಳೆದಿದ್ದೇನೆ. ಸೋಮವಾರವಷ್ಟೇ ನಾನು ನನ್ನ ಮೊದಲ ಹೆಜ್ಜೆಗಳ ಮೂಲಕ ನೇರವಾಗಿ ನನ್ನ ತೋಟಕ್ಕೆ ಹೋದೆ. ನಂತರ ದೀರ್ಘವಾದ ಉಸಿರನ್ನು ತೆಗೆದುಕೊಂಡೆ.  ನೀವು ಮನೆಯಲ್ಲಿಯೇ ಇರುವುದರ ಮೂಲಕ ಈ ಮಾರಕ ವೈರಸ್‌ ಅನ್ನು  ಹೋಗಲಾಡಿಸಬಹುದು. ಮೊದಲು  ತಮಾಷೆ ಮಾಡುವುದನ್ನು ನಿಲ್ಲಿಸಿ, ಎಲ್ಲವನ್ನೂ  ಗಂಭೀರವಾಗಿ ಪರಿಗಣಿಸಿ’ ಎಂದು ಬರೆದುಕೊಂಡಿದ್ದಾರೆ.

ಹೀಗೆ ಟೋಬಿ ಅಕಿಂಗ್‌ಬೇಡ್‌ ಅವರು ಕೋವಿಡ್ 19 ವೈರಸ್ ವಿರುದ್ಧ ಹೋರಾಡಿದ ಅನುಭವಗಳನ್ನು ಹಂಚಿಕೊಂಡಿದ್ದು, ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ 19 ವೈರಸ್ ವಿರುದ್ಧ ಹೋರಾಡಬೇಕು ಎಂದು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next