Advertisement
ಮೊದಲು ಬ್ಯಾಟಿಂಗ್ ನಡೆಸಿದ ಮಂಧನಾ ಪಡೆಗೆ ಗಳಿಸಲು ಸಾಧ್ಯವಾದದ್ದು 8 ವಿಕೆಟಿಗೆ 111 ರನ್ ಮಾತ್ರ. ಇಂಗ್ಲೆಂಡ್ 19.1 ಓವರ್‌ಗಳಲ್ಲಿ 5 ವಿಕೆಟಿಗೆ 114 ರನ್ ಬಾರಿಸಿ ವಿಜಯಿಯಾಯಿತು. ಇದು ಭಾರತಕ್ಕೆ ಟಿ20ಯಲ್ಲಿ ಎದುರಾದ ಸತತ 6ನೇ ಸೋಲು.
ಇಂಗ್ಲೆಂಡಿಗೂ ಚೇಸಿಂಗ್ ಕಠಿನವಾಗಿ ಪರಿಣಮಿಸಿತ್ತು. ಆದರೆ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಅಜೇಯ ಬ್ಯಾಟಿಂಗ್ ಮೂಲಕ ತಂಡವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದರು. ವ್ಯಾಟ್ ಗಳಿಕೆ ಅಜೇಯ 64 ರನ್ (55 ಎಸೆತ, 6 ಬೌಂಡರಿ). ಎರಡಂಕೆಯ ಸ್ಕೋರ್ ದಾಖಲಿಸಿದ ಮತ್ತೋರ್ವ ಆಟಗಾರ್ತಿ 6ನೇ ಕ್ರಮಾಂಕದ ಲಾರೆನ್ ವಿನ್‌ಫೀಲ್ಡ್ (29). ಉಳಿದವರೆಲ್ಲ ಅಗ್ಗಕ್ಕೆ ಔಟಾಗಿದ್ದರು. ಭಾರತದ ಬ್ಯಾಟಿಂಗ್ ಸರದಿಯಲ್ಲಿ 20 ರನ್ ಮಾಡಿದ ಮಿಥಾಲಿ ರಾಜ್ ಅವರದೇ ಹೆಚ್ಚಿನ ಗಳಿಕೆ. ದೀಪ್ತಿ ಶರ್ಮ, ಭಾರತಿ ಫುಲ್ಮಾಲಿ ತಲಾ 18 ರನ್ ಹೊಡೆದರು. ಹಲೀìನ್ ಡಿಯೋಲ್ 14 ರನ್ ಮಾಡಿದರೆ, ನಾಯಕಿ ಮಂಧನಾ 2 ಸಿಕ್ಸರ್ ಸಿಡಿಸಿ (12) ನಿರ್ಗಮಿಸಿದರು.
Related Articles
Advertisement
ಪಂದ್ಯಶ್ರೇಷ್ಠ: ಡೇನಿಯಲ್ ವ್ಯಾಟ್.