ಬ್ರಿಸ್ಬೇನ್: ಮಹತ್ವದ ಆ್ಯಶಸ್ ಸರಣಿ ಆರಂಭವಾಗಿದೆ. ಆಸ್ಟ್ರೇಲಿಯಾ ತಂಡದ ವೇಗದ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್ ಕೇವಲ 147 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಪಂದ್ಯದ ಮೊದಲ ಎಸೆತದಿಂದಲೇ ಇಂಗ್ಲೆಂಡ್ ಗೆ ಆಘಾತ ನೀಡಲಾರಂಭಿಸಿದ ಕಾಂಗರೂ ವೇಗಿಗಳು ಗಾಬಾ ಮೈದಾನದಲ್ಲಿ ಮೆರೆದಾಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಲೆಕ್ಕಾಚಾರವನ್ನು ಮಿಚೆಲ್ ಸ್ಟಾರ್ಕ್ ಬುಡಮೇಲು ಮಾಡಿದರು. ಪಂದ್ಯ ಮೊದಲ ಎಸೆತದಲ್ಲೇ ಇಂಗ್ಲೆಂಡ್ ಆರಂಭಿಕ ರೋರಿ ಬರ್ನ್ಸ್ ಬೌಲ್ಡಾದರು. ಸ್ಟಾರ್ಕ್, ಕಮಿನ್ಸ್, ಹ್ಯಾಜಲ್ ವುಡ್ ದಾಳಿಗೆ ಸಿಲುಕಿದ ಆಂಗ್ಲರು ಸತತ ವಿಕೆಟ್ ಕಳೆದುಕೊಂಡರು.
ಇದನ್ನೂ ಓದಿ:“ವಿಕ್ರಾಂತ್ ರೋಣ”: ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ
ಕೇವಲ 60 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದ ರೂಟ್ ಪಡೆಗೆ ಒಲಿ ಪೋಪ್ ಮತ್ತು ಜೋಸ್ ಬಟ್ಲರ್ ನೆರವಾದರು. ಅವರಿಬ್ಬರು 62 ರನ್ ಜೊತೆಯಾಟವಾಡಿದರು. ಬಟ್ಲರ್ 39 ರನ್ ಗಳಿಸಿದರೆ, ಪೋಪ್ 35 ರನ್ ಗಳಿಸಿ ಔಟಾದರು.
ಕೊನೆಯಲ್ಲಿ ಕ್ರಿಸ್ ವೋಕ್ಸ್ 21 ರನ್ ಗಳಿಸಿದರು. ಆಸೀಸ್ ಪರ ನೂತನ ನಾಯಕ ಪ್ಯಾಟ್ ಕಮಿನ್ಸ್ ಐದು ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಹ್ಯಾಜಲ್ ವುಡ್ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಕ್ಯಾಮರೂನ್ ಗ್ರೀನ್ ಒಂದು ವಿಕೆಟ್ ಕಿತ್ತರು.