Advertisement

ಜಗತ್ತಿಗೆ ಸೋಂಕಿನ ಚಿಂತೆ, ಇಂಗ್ಲೆಂಡ್ ಗೆ ಕ್ರಿಕೆಟ್ ಚಿಂತೆ: ಆಟ ಪುನಾರಂಭಿಸಲು ಹೊಸ ಉಪಾಯ

01:33 PM Mar 29, 2020 | keerthan |

ಲಂಡನ್‌: ಜಗತ್ತಿನಾದ್ಯಂತ ಕ್ರಿಕೆಟ್‌ ಕೂಟಗಳು ರದ್ದಾಗಿವೆ. ಭವಿಷ್ಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಮಾತ್ರ ತನ್ನ ನೆಲದಲ್ಲಿ ಪ್ರೇಕ್ಷಕರಿಲ್ಲದೇ ಕ್ರಿಕೆಟ್‌ ಪುನಾರಂಭಿಸಲು ಸಿದ್ಧತೆ ಶುರು ಮಾಡಿಕೊಂಡಿದೆ.

Advertisement

ಇಂಗ್ಲೆಂಡ್‌ನ‌ಲ್ಲಿ 500ಕ್ಕಿಂತ ಹೆಚ್ಚು ಜನರು ಒಂದು ಸ್ಥಳದಲ್ಲಿ ಸೇರುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ. ಇಷ್ಟು ಅವಕಾಶವಿರುವುದರಿಂದ, ತಾನು ಪಂದ್ಯ ನಡೆಸಬಹುದು ಎನ್ನುವುದು ಇಂಗ್ಲೆಂಡ್‌ ಮಂಡಳಿ ಲೆಕ್ಕಾಚಾರ. ಅದಕ್ಕಾಗಿ ಅದು ಕೋವಿಡ್-19 ಪರೀಕ್ಷಾ ಕೇಂದ್ರಗಳನ್ನು ತೆರೆಯುವುದು, ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡುವುದು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಅಚ್ಚರಿ ಹುಟ್ಟಿಸಿರುವುದು ಇಂಗ್ಲೆಂಡ್‌ ಸರ್ಕಾರದ ಆದೇಶ. ಭಾರತದಲ್ಲಿ ನಾಲ್ಕು ಜನ ಸೇರುವಂತಿಲ್ಲ ಎಂದು ಹೇಳಲಾಗಿರುವಾಗ, ಇಂಗ್ಲೆಂಡ್‌ನ‌ಲ್ಲಿ ಹೇಗೆ 500 ಜನರಿಗೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆಯಿದೆ. ಆ ದೇಶ ಸದ್ಯ ಮೇ 28ರವರೆಗೆ ಎಲ್ಲ ಕ್ರಿಕೆಟ್‌ ಚಟುವಟಿಕೆ ರದ್ದು ಮಾಡಿದೆ. ಆನಂತರ ಪಾಕಿಸ್ತಾನ, ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯ, ಐರ್ಲೆಂಡ್‌ ವಿರುದ್ಧದ ಸರಣಿಗೆ ಆತಿಥ್ಯ ವಹಿಸಬೇಕಾಗಿದೆ. ಒಂದು ವೇಳೆ ಇಂಗ್ಲೆಂಡ್‌ ಸರಣಿ ಆಯೋಜಿಸಿದರೂ, ಈ ದೇಶಗಳು ಪ್ರವಾಸಕ್ಕೆ ಹೋಗುತ್ತವೆಯೇ ಎನ್ನುವುದು ಈಗಿನ ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next