Advertisement

2800 ಕೋಟಿ ರೂ.ನಷ್ಟದ ಭೀತಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್

01:54 PM Apr 04, 2020 | keerthan |

ಲಂಡನ್‌: ಕೋವಿಡ್-19 ಹೊಡೆತದಿಂದಾಗಿ ಈಗಾಗಲೇ ಕ್ರಿಕೆಟಿಗರಿಗೆ ವೇತನ ಕಡಿತಗೊಳಿಸಿರುವ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ, ಮುಂದೆ ಕ್ರಿಕೆಟ್‌ ಕೂಟಗಳು ನಡೆಯದೇ ಹೋದರೆ 2800 ಕೋಟಿ ರೂ. ನಷ್ಟ ಅನುಭವಿಸುವ ಆತಂಕದಲ್ಲಿದೆ. ಸ್ವತಃ ಇದನ್ನುಇಸಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಾಮ್‌ ಹ್ಯಾರಿಸನ್‌ ತಿಳಿಸಿದ್ದಾರೆ.

Advertisement

ಸದ್ಯ ಮೇ 28ರ ತನಕ ಇಂಗ್ಲೆಂಡ್‌ ಎಲ್ಲ ಕ್ರಿಕೆಟ್‌ ಕೂಟವನ್ನು ರದ್ದುಗೊಳಿಸಿದೆ. ಇದು ಮುಂದುವರಿದದ್ದೇ ಆದರೆ ಮುಂದೆ ಅನೇಕ ಕ್ರಿಕೆಟ್‌ ಕೂಟಗಳು ರದ್ದಾಗುತ್ತವೆ. ಹೀಗಾದರೆ ಇಸಿಬಿ ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸಲಿದೆ ಎಂದು ಹ್ಯಾರಿಸನ್‌ ಆತಂಕ ವ್ಯಕ್ತಪಡಿಸಿದಾರೆ.

Advertisement

Udayavani is now on Telegram. Click here to join our channel and stay updated with the latest news.

Next