Advertisement

ಕೋವಿಡ್-19: ಸ್ವಯಂಸೇವಕಿಯಾದ ಇಂಗ್ಲೆಂಡ್‌ ಕ್ರಿಕೆಟ್‌ ನಾಯಕಿ ಹೆದರ್‌ ನೈಟ್‌

01:27 PM Mar 30, 2020 | keerthan |

ಲಂಡನ್‌: ಕ್ರೀಡಾಪಟುಗಳು ಒಂದಲ್ಲ ಒಂದು ರೀತಿಯಲ್ಲಿ ಕೋವಿಡ್-19 ಹೊತ್ತಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹೆದರ್‌ ನೈಟ್‌ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

Advertisement

ಹೆದರ್‌ ನೈಟ್‌ ಅವರು ಕೇವಲ ದೂರದಲ್ಲಿ ನಿಂತು ನೆರವು ನೀಡುತ್ತಿಲ್ಲ, ಸ್ವತಃ ಕಾರ್ಯ ರಂಗಕ್ಕೆ ಇಳಿದಿದ್ದಾರೆ. ಇಂಗ್ಲೆಂಡ್‌ನ‌ ರಾಷ್ಟ್ರೀಯ ಆರೋಗ್ಯ ಸೇವೆಗೆ ಅವರು ಸ್ವಯಂಸೇವಕರಾಗಿ ಸಹಿ ಹಾಕಿದ್ದಾರೆ.

ಅವರು ಔಷಧಗಳನ್ನು ಪೂರೈಸುವುದು, ಕೋವಿಡ್-19 ಬಗ್ಗೆ ಅರಿವು ಮೂಡಿಸುವುದು ಈ ಕೆಲಸಗಳಲ್ಲಿ ಇಂಗ್ಲೆಂಡ್‌ ಸರ್ಕಾರದ ಜೊತೆಯಾಗಲಿದ್ದಾರೆ. ಸದ್ಯ ಇಂಗ್ಲೆಂಡ್‌ ಪರಿಸ್ಥಿತಿ ಶೋಚನೀಯವಾಗಿದೆ. ಅಲ್ಲಿ ಅಂದಾಜು 15,000 ಪ್ರಕರಣಗಳು ಪತ್ತೆಯಾಗಿವೆ. ಸಾವುನೋವಿನ ಸಂಖ್ಯೆಯೂ ಜೋರಾಗಿಯೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next