Advertisement
ಮಂಗಳವಾರ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸುವ ಮೂಲಕ ಇಂಗ್ಲೆಂಡ್ ಸರಣಿ ವಶಪಡಿಸಿಕೊಂಡಿತು. ಭಾರತ 8 ವಿಕೆಟಿಗೆ 256 ರನ್ ಗಳಿಸಿದರೆ, ಇಂಗ್ಲೆಂಡ್ 44.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 260 ರನ್ ಬಾರಿಸಿ ಗೆದ್ದು ಬಂದಿತು. ಜೋ ರೂಟ್ ಅವರ ಸತತ 2ನೇ ಶತಕ, ರೂಟ್-ಮಾರ್ಗನ್ ಮುರಿಯದ 3ನೇ ವಿಕೆಟಿಗೆ ಪೇರಿಸಿದ 186 ರನ್ ಜತೆಯಾಟಗಳೆಲ್ಲ ಆತಿಥೇಯರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿಯೊಂದನ್ನು ಕಳೆದುಕೊಂಡಿತು. ಧೋನಿ ಗೈರಲ್ಲಿ ಹಂಗಾಮಿ ನಾಯಕರಾಗಿದ್ದಾಗ ಕೊಹ್ಲಿ ಎರಡೂ ಸರಣಿಗಳಲ್ಲಿ ಭಾರತಕ್ಕೆ ಗೆಲುವು ತಂದಿತ್ತಿದ್ದರು. ಕೊಹ್ಲಿ ಪೂರ್ಣ ಪ್ರಮಾಣದ ನಾಯಕನಾದ ಬಳಿಕ ಆಡಲಾದ ಎಲ್ಲ 6 ಸರಣಿಗಳಲ್ಲೂ ಭಾರತ ಜಯ ಸಾಧಿಸಿತ್ತು. ಭಾರತ ಸತತ 9 ಏಕದಿನ ಸರಣಿ ಗೆಲುವಿನ ಬಳಿಕ ಮೊದಲ ಸಲ ಸೋಲನುಭವಿಸಿತು. ಭಾರತ ಕೊನೆಯ ಸಲ 2016ರಲ್ಲಿ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಸರಣಿ ಸೋತಿತ್ತು.
Related Articles
Advertisement
ಜೋ ರೂಟ್ ಸತತ 2ನೇ ಶತಕ ಬಾರಿಸಿದರು. ಅವರೀಗ 3 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ 2 ಶತಕ ಹೊಡೆದ ಇಂಗ್ಲೆಂಡಿನ 3ನೇ ಕ್ರಿಕೆಟಿಗನಾಗಿದ್ದಾರೆ. ಉಳಿದಿಬ್ಬರೆಂದರೆ ಗ್ರಹಾಂ ಗೂಚ್ (1985ರಲ್ಲಿ ಆಸ್ಟ್ರೇಲಿಯ ವಿರುದ್ಧ) ಮತ್ತು ನಿಕ್ ನೈಟ್ (1996ರಲ್ಲಿ ಪಾಕಿಸ್ಥಾನ ವಿರುದ್ಧ).
ರೂಟ್ ಇಂಗ್ಲೆಂಡ್ ಪರ ಏಕದಿನಗಳಲ್ಲಿ ಸರ್ವಾಧಿಕ 13 ಶತಕ ಬಾರಿಸಿದ ದಾಖಲೆ ಸ್ಥಾಪಿಸಿದರು.
ರೂಟ್-ಮಾರ್ಗನ್ ಮುರಿಯದ 3ನೇ ವಿಕೆಟಿಗೆ 186 ರನ್ ಪೇರಿಸಿದರು. ಇದು ಎಲ್ಲ ವಿಕೆಟ್‌ಗಳಿಗೂ ಅನ್ವಯಿಸುವಂತೆ ಭಾರತದ ವಿರುದ್ಧ ಇಂಗ್ಲೆಂಡ್ ದಾಖಲಿಸಿದ ಅತೀ ದೊಡ್ಡ ಜತೆಯಾಟ.