Advertisement

ಇಂಗ್ಲೆಂಡ್ ಗೆ ಸರಣಿ: ಮೊದಲ ಬಾರಿಗೆ ತವರಿನಲ್ಲಿ ವೈಟ್ ವಾಶ್ ಅವಮಾನಕ್ಕೆ ಸಿಲುಕಿದ ಪಾಕ್

04:14 PM Dec 20, 2022 | Team Udayavani |

ಕರಾಚಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲೂ ಸೋಲನುಭವಿಸಿದ ಪಾಕಿಸ್ಥಾನ ತಂಡವು ಇದೇ ಮೊದಲ ಬಾರಿಗೆ ತವರಿನಲ್ಲಿ ವೈಟ್ ವಾಶ್ ಅವಮಾನ ಅನುಭವಿಸಿದೆ.

Advertisement

ಗೆಲುವಿಗೆ 167 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಗೆ ನಾಲ್ಕನೇ ದಿನದಾಟದಲ್ಲಿ 55 ರನ್ ಅಗತ್ಯವಿತ್ತು. ಇದನ್ನು ಕೇವಲ 12 ಓವರ್ ನಲ್ಲಿ ಗುರಿ ತಲುಪಿತು. ಬೆನ್ ಡಕೆಟ್ 82 ರನ್ ಗಳಿಸಿ ಅಜೇಯರಾಗುಳಿದರು.

ಪಾಕಿಸ್ಥಾನವು ಮೊದಲ ಇನ್ನಿಂಗ್ಸ್ ನಲ್ಲಿ 304 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ ನಲ್ಲಿ 216 ರನ್ ಮಾಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 354 ರನ್ ಮಾಡಿದರೆ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು 170 ರನ್ ಮಾಡಿ ಜಯ ಗಳಿಸಿತು.

23 ಗೆಲುವು ಕಂಡಿದ್ದ ಕರಾಚಿ ಅಂಗಳದಲ್ಲೂ ಪಾಕಿಸ್ಥಾನಕ್ಕೆ ಈ ಬಾರಿ ಸೋಲು ತಪ್ಪಿಸಲಾಗಲಿಲ್ಲ. ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಪಾಕಿಸ್ಥಾನ ಸೋಲನುಭವಿಸಿತು. ಇದರೊಂದಿಗೆ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಮತ್ತೊಂದು ಟೆಸ್ಟ್ ಸರಣಿ ಗೆದ್ದುಕೊಂಡಿತು.

ಮೂರು ಪಂದ್ಯಗಳಲ್ಲಿ ಶತಕ ಬಾರಿಸಿದ ಇಂಗ್ಲೆಂಡ್ ನ ಹ್ಯಾರಿ ಬ್ರೂಕ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next