Advertisement

ಮುನ್ನುಗ್ಗಿ ಬಂದ ಪಾಕ್‌ : 12 ರನ್ನಿನಿಂದ ಗೆದ್ದ ಇಂಗ್ಲೆಂಡ್‌

09:41 AM May 13, 2019 | Team Udayavani |

ಸೌತಾಂಪ್ಟನ್‌: ವಿಶ್ವಕಪ್‌ ಸಮರಕ್ಕೆ ಭರ್ಜರಿ ತಾಲೀಮು ಆರಂಭಿಸಿರುವ ಇಂಗ್ಲೆಂಡ್‌ ಮತ್ತು ಪಾಕಿಸ್ಥಾನ ತಂಡಗಳು ದ್ವಿತೀಯ ಏಕದಿನ ಪಂದ್ಯದಲ್ಲಿ ಜಿದ್ದಾಜಿದ್ದಿ ಹೋರಾಟ ಸಂಘಟಿಸಿವೆ. ಭಾರೀ ಮೊತ್ತದ ಈ ಮೇಲಾಟದಲ್ಲಿ ಇಯಾನ್‌ ಮಾರ್ಗನ್‌ ಪಡೆ 12 ರನ್ನುಗಳ ರೋಚಕ ಜಯ ಸಾಧಿಸಿತು.

Advertisement

ಸೌತಾಂಪ್ಟನ್‌ನ “ರೋಸ್‌ ಬೌಲ್‌’ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 3 ವಿಕೆಟಿಗೆ 373 ರನ್‌ ರಾಶಿ ಹಾಕಿದರೆ, ಪಾಕಿಸ್ಥಾನ 7 ವಿಕೆಟಿಗೆ 361 ರನ್‌ ಗಳಿಸಿ ಸಣ್ಣ ಅಂತರದಲ್ಲಿ ಸೋತು ಹೋಯಿತು. 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಬಟ್ಲರ್‌ 50 ಎಸೆತಗಳಲ್ಲಿ ಶತಕ
ಈ ಪಂದ್ಯದಲ್ಲಿ ಕ್ರೀಸಿಗಿಳಿದ ಅಗ್ರ ಕ್ರಮಾಂಕದ ಅಷ್ಟೂ ಆಟಗಾರರಿಂದ ದೊಡ್ಡ ಮೊತ್ತದ ಕೊಡುಗೆ ಸಂದಾಯವಾಯಿತು. 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಜಾಸ್‌ ಬಟ್ಲರ್‌ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿ ಮೆರೆದರು. ಅವರ ಒಟ್ಟು ಗಳಿಕೆ ಅಜೇಯ 110 ರನ್‌ (55 ಎಸೆತ, 9 ಸಿಕ್ಸರ್‌, 6 ಬೌಂಡರಿ). ನಾಯಕ ಮಾರ್ಗನ್‌ 48 ಎಸೆತಗಳಿಂದ ಅಜೇಯ 71 ರನ್‌ ಸಿಡಿಸಿದರು (6 ಬೌಂಡರಿ, 1 ಸಿಕ್ಸರ್‌). ಇವರಿಬ್ಬರ ಮುರಿಯದ 4ನೇ ವಿಕೆಟ್‌ ಜತೆಯಾಟದಲ್ಲಿ 162 ರನ್‌ ಹರಿದು ಬಂತು. ಕೊನೆಯ 14.5 ಓವರ್‌ಗಳಲ್ಲಿ ಇವರದೇ ಬ್ಯಾಟಿಂಗ್‌ ಅಬ್ಬರವಾಗಿತ್ತು. ಬಟ್ಲರ್‌ ಅವರ 50 ಎಸೆತಗಳ ಶತಕ ಇಂಗ್ಲೆಂಡ್‌ ಏಕದಿನದ 2ನೇ ಅತೀ ವೇಗದ ಶತಕವಾಗಿದೆ. ಮೊದಲ ಸ್ಥಾನವನ್ನೂ ಬಟ್ಲರ್‌ ಅಕ್ರಮಿಸಿಕೊಂಡಿದ್ದಾರೆ. 2015ರ ಇಂಗ್ಲೆಂಡ್‌ ಎದುರಿನ ದುಬಾೖ ಪಂದ್ಯದಲ್ಲಿ 46 ಎಸೆತಗಳಿಂದ ಶತಕ ಸಿಡಿಸಿದ್ದರು.

ಫ‌ಕಾರ್‌ ಭರ್ಜರಿ ತಿರುಗೇಟು
ದೊಡ್ಡ ಮೊತ್ತಕ್ಕೆ ಪಾಕ್‌ ಭರ್ಜರಿಯಾಗಿಯೇ ಉತ್ತರ ನೀಡತೊಡಗಿತು. ಆರಂಭಕಾರ ಫ‌ಕಾರ್‌ ಜಮಾನ್‌ ಸಿಡಿದು ನಿಂತರು. 33ನೇ ಓವರ್‌ ವೇಳೆ ಪಾಕ್‌ ಒಂದೇ ವಿಕೆಟಿಗೆ 227 ರನ್‌ ಬಾರಿಸಿ ಮುನ್ನುಗ್ಗುತ್ತಿತ್ತು. ಫ‌ಕಾರ್‌ ಗಳಿಕೆ 106 ಎಸೆತಗಳಿಂದ 138 ರನ್‌ (12 ಬೌಂಡರಿ, 4 ಸಿಕ್ಸರ್‌). ಬಾಬರ್‌ ಆಜಂ, ಆಸಿಫ್ ಅಲಿ ತಲಾ 51 ರನ್‌ ಹೊಡೆದರು. ಕೊನೆಯಲ್ಲಿ ನಾಯಕ ಸಫ‌ìರಾಜ್‌ ಅಜೇಯ ಬ್ಯಾಟಿಂಗ್‌ ನಡೆಸಿದರೂ ತಂಡವನ್ನು ದಡ ಸೇರಿಸುವಲ್ಲಿ ಯಶಸ್ಸು ಕಾಣಲಿಲ್ಲ.

ಇಂಗ್ಲೆಂಡ್‌
ಜಾಸನ್‌ ರಾಯ್‌ ಸಿ ವಾಸಿಮ್‌ ಬಿ ಅಲಿ 87
ಜಾನಿ ಬೇರ್‌ಸ್ಟೊ ಸಿ ಫ‌ಕಾರ್‌ ಬಿ ಅಫ್ರಿದಿ 51
ಜೋ ರೂಟ್‌ ಸಿ ಸೊಹೈಲ್‌ ಬಿ ಶಾ 40
ಇಯಾನ್‌ ಮಾರ್ಗನ್‌ ಔಟಾಗದೆ 71
ಜಾಸ್‌ ಬಟ್ಲರ್‌ ಔಟಾಗದೆ 110
ಇತರ 14
ಒಟ್ಟು (3 ವಿಕೆಟಿಗೆ) 373
ವಿಕೆಟ್‌ ಪತನ: 1-115, 2-177, 3-211.
ಶಹೀನ್‌ ಅಫ್ರಿದಿ 10-0-80-1
ಫಾಹಿಮ್‌ ಅಶ್ರಫ್ 10-0-69-0
ಇಮಾದ್‌ ವಾಸಿಮ್‌ 10-0-63-0
ಹಸನ್‌ ಅಲಿ 10-1-8-1
ಯಾಸಿರ್‌ ಶಾ 7-0-60-1
ಹ್ಯಾರಿಸ್‌ ಸೊಹೈಲ್‌ 3-0-16-0

Advertisement

ಪಾಕಿಸ್ಥಾನ
ಇಮಾಮ್‌ ಉಲ್‌ ಹಕ್‌ ಸಿ ಮತ್ತು ಬಿ ಮೊಯಿನ್‌ 35
ಫ‌ಕಾರ್‌ ಜಮಾನ್‌ ಸಿ ಬಟ್ಲರ್‌ ಬಿ ವೋಕ್ಸ್‌ 138
ಬಾಬರ್‌ ಆಜಂ ಸಿ ಮತ್ತು ಬಿ ರಶೀದ್‌ 51
ಆಸಿಫ್ ಅಲಿ ಸಿ ಸ್ಟೋಕ್ಸ್‌ ಬಿ ವಿಲ್ಲಿ 51
ಹ್ಯಾರಿಸ್‌ ಸೊಹೈಲ್‌ ಸಿ ಬೇರ್‌ಸ್ಟೊ ಬಿ ಪ್ಲಂಕೆಟ್‌ 14
ಸಫ‌ìರಾಜ್‌ ಅಹ್ಮದ್‌ ಔಟಾಗದೆ 41
ಇಮಾದ್‌ ವಾಸಿಮ್‌ ಸಿ ಬಟ್ಲರ್‌ ಬಿ ವಿಲ್ಲಿ 8
ಫಾಹಿಮ್‌ ಅಶ್ರಫ್ ಸಿ ಸ್ಟೋಕ್ಸ್‌ ಬಿ ಪ್ಲಂಕೆಟ್‌ 3
ಹಸನ್‌ ಅಲಿ ಔಟಾಗದೆ 4
ಇತರ 16
ಒಟ್ಟು (7 ವಿಕೆಟಿಗೆ) 361
ವಿಕೆಟ್‌ ಪತನ: 1-92, 2-227, 3-233, 4-274, 5-323, 6-345, 7-353.
ಬೌಲಿಂಗ್‌:
ಕ್ರಿಸ್‌ ವೋಕ್ಸ್‌ 9-0-72-1
ಡೇವಿಡ್‌ ವಿಲ್ಲಿ 10-0-57-2
ಮೊಯಿನ್‌ ಅಲಿ 10-0-66-1
ಲಿಯಮ್‌ ಪ್ಲಂಕೆಟ್‌ 9-0-64-2
ಆದಿಲ್‌ ರಶೀದ್‌ 10-0-81-1
ಬೆನ್‌ ಸ್ಟೋಕ್ಸ್‌ 2-0-15-0

ಪಂದ್ಯಶ್ರೇಷ್ಠ: ಜಾಸ್‌ ಬಟ್ಲರ್‌

Advertisement

Udayavani is now on Telegram. Click here to join our channel and stay updated with the latest news.

Next