Advertisement

ಇಂಗ್ಲೆಂಡ್‌ಗೆ ಸರಣಿ ಕಿರೀಟ : ಕೊಹ್ಲಿ, ಧವನ್‌ ಜತೆಯಾಟ ವ್ಯರ್ಥ

09:37 AM Jul 18, 2018 | Team Udayavani |

ಲೀಡ್ಸ್‌: ಜೋ ರೂಟ್‌ (ಅಜೇಯ 100 ರನ್‌) ಮತ್ತು ಇಯಾನ್‌ ಮಾರ್ಗನ್‌ (ಅಜೇಯ 88 ರನ್‌) ನೆರವಿನಿಂದ ನಿರ್ಣಾಯಕ ಪಂದ್ಯದಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಆತಿಥೇಯ ಇಂಗ್ಲೆಂಡ್‌ 2-1 ರಿಂದ ಏಕದಿನ
ಸರಣಿಯನ್ನು ತನ್ನದಾಗಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 50 ಓವರ್‌ಗೆ 8 ವಿಕೆಟ್‌ಗೆ 256 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌
ಅಗ್ರ ಬ್ಯಾಟ್ಸ್‌ಮನ್‌ ಪ್ರಚಂಡ ಸಾಹಸದಿಂದಾಗಿ 44.3 ಓವರ್‌ ಗೆ ಕೇವಲ 2 ವಿಕೆಟ್‌ ಕಳೆದುಕೊಂಡು 260 ರನ್‌ಗಳಿಸಿ
ಗೆಲುವಿನ ದಡ ಸೇರಿತು. ಆರಂಭದಲ್ಲಿ 2 ವಿಕೆಟ್‌ ಕಳೆದುಕೊಂಡರೂ ರೂಟ್‌ ಮತ್ತು ಮೊರ್ಗನ್‌ ಸಾಹಸಮಯ
ಜತೆಯಾಟದಿಂದ ಇಂಗ್ಲೆಂಡ್‌ ಸುಲಭ ಗೆಲುವು ಸಾಧಿಸಿತು.ಇದರೊಂದಿಗೆ ಟಿ20 ಸರಣಿ ಸೋಲಿಗೆ ಆತಿಥೇಯರು ಸೇಡು
ತೀರಿಸಿಕೊಂಡರು.

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತೀಯರು ಅದ್ಭುತ ಆಟ ಪ್ರದರ್ಶಿಸಲಿಲ್ಲ. ಅಗ್ರ ಕ್ರಮಾಂಕದಲ್ಲಿ ವಿರಾಟ್‌
ಕೊಹ್ಲಿ (71 ರನ್‌), ಶಿಖರ್‌ ಧವನ್‌ (44 ರನ್‌) ಉತ್ತಮ ಜತೆಯಾಟ ನೀಡಿದರೂ ಬ್ಯಾಟ್ಸ್‌ಮನ್‌ಗಳ ಹಠಾತ್‌ ಕುಸಿತ
ಪರಿಣಾಮದಿಂದ ಇಂಗ್ಲೆಂಡ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ಸಾಧಾರಣ ಸವಾಲನ್ನು ನೀಡಲಷ್ಟೇ
ಸಾಧ್ಯವಾಯಿತು.

ಕೊಹ್ಲಿ, ಧವನ್‌ ಜತೆಯಾಟ: ಶಿಖರ್‌ ಧವನ್‌ ಜತೆಗೆ ರೋಹಿತ್‌ ಶರ್ಮ (2 ರನ್‌) ಇನಿಂಗ್ಸ್‌ ಆರಂಭಿಸಿದರು.
ತಂಡದ ಒಟ್ಟು ರನ್‌ 13 ಆಗಿದ್ದಾಗ ವಿಲ್ಲಿ ಎಸೆತದಲ್ಲಿ ಹಿಟ್‌ ಮ್ಯಾನ್‌ ರೋಹಿತ್‌ ಅವರು ವುಡ್‌ ಮ್ಯಾನ್‌ಗೆ ಕ್ಯಾಚ್‌ ನೀಡಿ ಔಟಾದರು. ಈ ಹಂತದಲ್ಲಿ ವಿರಾಟ್‌ ಕೊಹ್ಲಿ-ಶಿಖರ್‌ ಧವನ್‌ ಒಂದಾದರು. 81 ರನ್‌ ಜತೆಯಾಟ ಮಾಡಿದರು. ಆರಂಭಿಕ
ಆಘಾತವನ್ನು ಸರಿಪಡಿಸಲು ಪ್ರಯತ್ನಿಸಿದರು. 49 ಎಸೆತ ಎದುರಿಸಿದ್ದ ಧವನ್‌ 7 ಬೌಂಡರಿ ಸಿಡಿಸಿದ್ದಾಗ ಇಲ್ಲದ ರನ್‌ ಕದಿಯಲು ಪ್ರಯತ್ನಿಸಿ ಸ್ಟೋಕ್ಸ್‌ ಎಸೆತದಲ್ಲಿ ರನೌಟಾದರು.

ಆ ಬಳಿಕ ಕೊಹ್ಲಿ ಜತೆಗೆ ದಿನೇಶ್‌ ಕಾರ್ತಿಕ್‌ (21 ರನ್‌) ಜತೆಗೂಡಿದರು. 22 ಎಸೆತದ ಎದುರಿಸಿದ ಕಾರ್ತಿಕ್‌ 3
ಬೌಂಡರಿ ಸಿಡಿಸಿದ್ದಾಗ ರಶೀದ್‌ ಎಸೆತದಲ್ಲಿ ಬೌಲ್ಡ್‌ ಆದರು. ಆಗ ತಂಡದ ಒಟ್ಟು ಮೊತ್ತ 3 ವಿಕೆಟ್‌ಗೆ 125 ರನ್‌ ಆಗಿತ್ತು.
ಕಾರ್ತಿಕ್‌ ಔಟಾದ ಬೆನ್ನಲ್ಲೇ ಅರ್ಧಶತಕ ದಾಖಲಿಸಿ ಶತಕದತ್ತ ಸಾಗುತ್ತಿದ್ದ ವಿರಾಟ್‌ ಕೊಹ್ಲಿ ಕೂಡ ಎಡವಿದರು. ಮತ್ತೂಮ್ಮೆ ಅಪಾಯಕಾರಿಯಾದ ರಶೀದ್‌ ಕೊಹ್ಲಿಯನ್ನು ಬೌಲ್ಡ್‌ ಮಾಡಿದರು. ಆಗ ತಂಡದ ಮೊತ್ತ 4 ವಿಕೆಟ್‌ಗೆ 156 ರನ್‌ ಆಗಿತ್ತು. ಈ ಬೆನ್ನಲ್ಲೇ ಸುರೇಶ್‌ ರೈನಾ (1 ರನ್‌) ಕೂಡ ರಶೀದ್‌ ಮ್ಯಾಜಿಕ್‌ ಅರಿಯಲಾಗದೆ ವಿಕೆಟ್‌
ಕಳೆದುಕೊಳ್ಳಬೇಕಾಯಿತು. ಅಲ್ಲಿಗೆ ಭಾರತ 31 ಓವರ್‌ಗೆ 158 ರನ್‌ಗೆ 7 ವಿಕೆಟ್‌ ಕಳೆದುಕೊಂಡಿತ್ತು.
ಮತ್ತೂಮ್ಮೆ ಧೋನಿ ನಿಧಾನ: ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿ ಸಾಮಾಜಿಕ
ಜಾಲತಾಣದಲ್ಲಿ ಟೀಕೆಗೊಳಗಾಗಿದ್ದ ಎಂ.ಎಸ್‌.ಧೋನಿ ಮತ್ತೂಮ್ಮೆ ಅಭಿಮಾನಿಗಳ ಸಿಟ್ಟಿಗೆ ಗುರಿಯಾಗಬೇಕಾಯಿತು.

Advertisement

66 ಎಸೆತದಿಂದ 4 ಬೌಂಡರಿ ಒಳಗೊಂಡ 42 ರನ್‌ ಅಷ್ಟನ್ನೇ ಧೋನಿಗಳಿಸಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ (21
ರನ್‌), ಭುವನೇಶ್ವರ್‌ ಕುಮಾರ್‌ (21 ರನ್‌) ಮತ್ತು ಶಾದೂìಲ್‌ ಠಾಕೂರ್‌ (ಅಜೇಯ 22 ರನ್‌) ಗಳಿಸಿದ್ದರಿಂದ
ಭಾರತ 250 ರನ್‌ ಗಡಿದಾಟಲು ಸಾಧ್ಯವಾಯಿತು

Advertisement

Udayavani is now on Telegram. Click here to join our channel and stay updated with the latest news.

Next