Advertisement

ದೇಶಿಯ ಟಿ20ಯಲ್ಲಿ ಸ್ಫೋಟಿಸಿದ ಬೆನ್‌ಸ್ಟೋಕ್ಸ್‌

06:50 AM Dec 15, 2017 | Team Udayavani |

ಕ್ರೈಸ್ಟ್‌ಚರ್ಚ್‌: ನೈಟ್‌ ಕ್ಲಬ್‌ವೊಂದರ ಹೊರಗಡೆ ಹೊಡೆದಾಟ ನಡೆಸಿ ಬೀದಿ ರಂಪಾಟ ಮಾಡಿದ್ದ ಇಂಗ್ಲೆಂಡ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ನ್ಯೂಜಿಲೆಂಡ್‌ನ‌ಲ್ಲಿ ನಡೆದ ದೇಶಿಯ ಟಿ20 ಪಂದ್ಯವೊಂದರಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿ ಸುದ್ದಿಯಾಗಿದ್ದಾರೆ. 

Advertisement

ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ್ದ ಕಾರಣಕ್ಕಾಗಿ ಸ್ಟೋಕ್ಸ್‌ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರದಬ್ಬಲಾಗಿತ್ತು. ಹೀಗಿದ್ದರೂ ಕಿವೀಸ್‌ನಲ್ಲಿ ನಡೆದ ಟಿ20 ಕೂಟದಲ್ಲಿ ಕ್ಯಾಂಟರ್ಬರಿ ತಂಡವನ್ನು ಸ್ಟೋಕ್ಸ್‌ ಪ್ರತಿನಿಧಿಸಿದ್ದರು. 47 ಎಸೆತದಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್‌ ಒಳಗೊಂಡ 93 ರನ್‌ ಸಿಡಿಸಿದ್ದಾರೆ. ಇವರ ಸಾಹಸಮಯ ಬ್ಯಾಟಿಂಗ್‌ ನೆರವಿನಿಂದ ಒಟಾಗೊ ವಿರುದ್ಧ ಕ್ಯಾಂಟರ್ಬರಿ ತಂಡ 134 ರನ್‌ ಗೆಲುವು ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next