Advertisement

England; ಭಾರತ ಪ್ರವಾಸಕ್ಕೆ 4 ಸ್ಪೆಷಲಿಸ್ಟ್‌  ಸ್ಪಿನ್ನರ್ಸ್

10:46 PM Dec 11, 2023 | Team Udayavani |

ಲಂಡನ್‌: ಮುಂದಿನ ತಿಂಗಳು 5 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಭಾರತಕ್ಕೆ ಆಗಮಿಸಲಿರುವ ಇಂಗ್ಲೆಂಡ್‌ ನಾಲ್ವರು ಸ್ಪೆಷ ಲಿಸ್ಟ್‌ ಸ್ಪಿನ್ನರ್ಸ್ ಗಳನ್ನು ಸೇರಿಕೊಂಡಿದೆ. ಇವರಲ್ಲಿ ಇಬ್ಬರು ಹೊಸಬರು.

Advertisement

16ರ ಬಳಗದಲ್ಲಿರುವ ನೂತನ ಸ್ಪಿನ್ನರ್‌ಗಳೆಂದರೆ ಟಾಮ್‌ ಹಾರ್ಟ್ಲಿ ಮತ್ತು ಶೋಯಿಬ್‌ ಬಶೀರ್‌. ಇವರಿಬ್ಬರೂ ಆಫ್ ಸ್ಪಿನ್ನರ್‌ ಆಗಿದ್ದಾರೆ. ಜಾಕ್‌ ಲೀಚ್‌ ಮತ್ತು ರೇಹಾನ್‌ ಅಹ್ಮದ್‌ ಉಳಿದಿಬ್ಬರು ಸ್ಪಿನ್ನರ್. ವೇಗಿ ಗಸ್‌ ಅಟ್ಕಿನ್ಸನ್‌ ಮೊದಲ ಸಲ ಟೆಸ್ಟ್‌ ತಂಡಕ್ಕೆ ಕರೆ ಪಡೆದಿದ್ದಾರೆ. ಆದರೆ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಮತ್ತು ಜಾಸ್‌ ಬಟ್ಲರ್‌ ಸ್ಥಾನ ಪಡೆಯದಿರುವುದು ಅಚ್ಚರಿಗೆ ಕಾರಣವಾಗಿದೆ.ಸರಣಿಯ ಮೊದಲ ಟೆಸ್ಟ್‌ ಜ. 25ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ.

ಇಂಗ್ಲೆಂಡ್‌ ತಂಡ: ಬೆನ್‌ ಸ್ಟೋಕ್ಸ್‌ (ನಾಯಕ), ರೇಹಾನ್‌ ಅಹ್ಮದ್‌, ಜೇಮ್ಸ್‌ ಆ್ಯಂಡರ್ಸನ್‌, ಗಸ್‌ ಅಟ್ಕಿನ್ಸನ್‌, ಜಾನಿ ಬೇರ್‌ಸ್ಟೊ, ಶೋಯಿಬ್‌ ಬಶೀರ್‌, ಹ್ಯಾರಿ ಬ್ರೂಕ್‌, ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಬೆನ್‌ ಫೋಕ್ಸ್‌, ಟಾಮ್‌ ಹಾರ್ಟ್ಲಿ, ಜಾಕ್‌ ಲೀಚ್‌, ಓಲೀ ಪೋಪ್‌, ಓಲೀ ರಾಬಿನ್ಸನ್‌, ಜೋ ರೂಟ್‌, ಮಾರ್ಕ್‌ ವುಡ್‌.

Advertisement

Udayavani is now on Telegram. Click here to join our channel and stay updated with the latest news.

Next