Advertisement
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ 158ನೇ ಜನ್ಮದಿನಾಚರಣೆಯ ಅಂಗವಾಗಿ ಶನಿವಾರ ನಡೆದ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ ಎಂಜಿನಿಯರ್ ಡೇ-2018 ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ದ ಇನ್‌ಸ್ಟಿಟ್ಯೂಶನ್ ಆಫ್ ಎಂಜಿನಿ ಯರ್ (ಇಂಡಿಯಾ), ಕೊಡಗು, ದ.ಕ. ಮತ್ತು ಉಡುಪಿ ಎಂಜಿನಿಯರ್ ಅಸೋಸಿಯೇಶನ್ ಹಾಗೂ ಇನ್‌ಸ್ಟಿಟ್ಯೂಶನ್ ಆಫ್ ವ್ಯಾಲೂವರ್ ಮಂಗಳೂರು ಘಟಕಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ನಗರದ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ನಡೆಯಿತು.
ಪ್ರಾಜೆಕ್ಟೆçಲ್‌ನ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಅನಿರುದ್ಧ ರಾವ್ ಕಟಪಾಡಿ ಅವರಿಗೆ ಡಾ| ಬಿ.ಆರ್. ಸಾಮಗ ಯುವ ಸಿವಿಲ್ ಎಂಜಿನಿಯರ್ ಪ್ರಶಸ್ತಿ, ಡಾ| ವಿದ್ಯಾ ಶೆಟ್ಟಿ ಕೆ. ಅವರಿಗೆ ಮಂಗಳೂರು ಲೋಕಲ್ ಸೆಂಟರ್ ಯಂಗ್ ಎಂಜಿನಿಯರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಿವೃತ್ತ ಸೂಪರಿಂಟೆಂಡಿಂಗ್ ಎಂಜಿನಿಯರ್ ಬಿ.ಎಸ್. ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಐಇಐ, ಎಂಎಲ್‌ಸಿಯ ಅಧ್ಯಕ್ಷ ಡಾ| ಕೆ. ಪಾಂಡುರಂಗ ವಿಠಲ್, ಕಾರ್ಯದರ್ಶಿ ಡಾ| ಬಿ.ಎಂ. ಸುನಿಲ್, ಇನ್‌ಸ್ಟಿಟ್ಯೂಶನ್ ಆಫ್ ವ್ಯಾಲೂವರ್ ಮಂಗಳೂರು ಘಟಕದ ಅಧ್ಯಕ್ಷ ಪ್ರೊ| ಜಿ.ಆರ್. ರೈ, ಕಾರ್ಯದರ್ಶಿ ಎಸ್.ಎನ್. ಭಟ್, ಕೊಡಗು, ದ.ಕ. ಮತ್ತು ಉಡುಪಿ ಎಂಜಿನಿಯರ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಂ. ದಿವಾಕರ್ ಶೆಟ್ಟಿ, ಕೆಪಿಟಿ ಪ್ರಾಂಶುಪಾಲ ವಿಜಯ್‌ಕುಮಾರ್ ಉಪಸ್ಥಿತರಿದ್ದರು.
Related Articles
Advertisement