Advertisement

ದೇಶದ ಅಭಿವೃದ್ಧಿಗಾಗಿ ಇಂಜಿನಿಯರ್ ಗಳು ವಿಶ್ವೇಶ್ವರಯ್ಯ ಅವರ ಮಾದರಿಯಲ್ಲಿ ಶ್ರಮಿಸಿ; ಕಾರಜೋಳ

01:46 PM Sep 15, 2020 | sudhir |

ಬೆಂಗಳೂರು : ವಿಶ್ವಕಂಡ ಮಹಾನ್ ಇಂಜಿನಿಯರ್ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ತತ್ವ, ಸಿದ್ದಾಂತ, ಆದರ್ಶ ಹಾಗೂ ತಂತ್ರಜ್ಞಾನವನ್ನು ಎಲ್ಲಾ ಇಂಜಿನಿಯರ್ ಗಳು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಅವರ ಮಾದರಿಯಂತೆ ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಕರೆ ನೀಡಿದರು.

Advertisement

ಬೆಂಗಳೂರಿನ ಕೆ.ಆರ್. ವೃತ್ತದ ಬಳಿ ಇರುವ ಸರ್.ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಇಂಜಿನಿಯರ್ ಗಳ ದಿನಾಚರಣೆಯ ಅಂಗವಾಗಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾತನಾಡಿದ ಅವರು, ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅಪರಿಮಿತವಾದುದು.

ಮೈಸೂರಿನ ಕೆ.ಆರ್. ಸಾಗರ, ಹಿರಿಯೂರಿನ ವಾಣಿವಿಲಾಸ ಸಾಗರ, ಸೇರಿದಂತೆ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿದ್ದಾರೆ. ಕುಡಿಯುವ ನೀರಿಗಾಗಿ ವಿಜಯಪುರ ಸೇರಿದಂತೆ ಅನೇಕ ಕೆರೆಗಳನ್ನು ನಿರ್ಮಿಸಿದ್ದಾರೆ. ಅವರು ಅಂದು ನಿರ್ಮಿಸಿದ ಅಣೆಕಟ್ಟು, ಕೆರೆಗಳು ಇಂದಿಗೂ ಸುಭದ್ರವಾಗಿದ್ದು, ನೀರಾವರಿ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಆಧಾರವಾಗಿವೆ. ಅಂತಹ ಪರಿಣಿತ ತಂತ್ರಜ್ಞಾನ ಹಾಗೂ ಪೂರಕ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಶಾಶ್ವತವಾಗಿರುವಂತಹ ಕಾಮಗಾರಿಗಳನ್ನು ಕೈಗೊಂಡು ಅಜರಾಮರವಾಗಿ, ವಿಶ್ವವಿಖ್ಯಾತರಾಗಿದ್ದಾರೆ.

ಇಂದಿನ ಇಂಜಿನಿಯರ್‍ಗಳು ಅಂತಹ ತಂತ್ರಜ್ಞಾನದ ಪರಿಣಿತಿ ಪಡೆಯಬೇಕು. ಇಂಜಿನಿಯರ್‍ಗಳು ತಮ್ಮ ಉದ್ಯೋಗವನ್ನು ಕೇವಲ ಸರ್ಕಾರ ಸೇವೆ ಎಂದು ಭಾವಿಸದೇ, ದೇಶದ ಅಭಿವೃದ್ಧಿಗಾಗಿ ಉನ್ನತಿಗಾಗಿ ಶ್ರಮಿಸಬೇಕು. ನೂತನ ಆವಿಷ್ಕಾರ, ಮೂಲಭೂತಸೌಕರ್ಯಗಳ ಅಭಿವೃದ್ಧಿ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶ ದಾಪುಗಾಲಿಡಲು ಹೆಮ್ಮೆಯ ಇಂಜಿನಿಯರ್‍ಗಳು ಕೊಡುಗೆ ಅಪರಿಮಿತ ಎಂದು ಸ್ಮರಿಸಿದರು,

Advertisement

Udayavani is now on Telegram. Click here to join our channel and stay updated with the latest news.

Next