Advertisement
ನಮ್ಮ ಎಂಜಿನಿಯರ್ ಇತಿಹಾಸ ಪರಂಪರೆ ಪ್ರಾರಂಭವಾಗುವುದು, ಮಯ ವಿಶ್ವಕರ್ಮ ಇವರಂತ ಶ್ರೇಷ್ಠ ವ್ಯಕ್ತಿತ್ವಗಳಿಂದ. ಇಂತಹ ಪರಂಪರೆಯಲ್ಲಿ ಹುಟ್ಟಿ ಬಂದ ಪ್ರತಿಯೊಬ್ಬ ಎಂಜಿನಿಯರ್ ಕೂಡ ಮಯ ವಿಶ್ವಕರ್ಮರೇ ಆಗಿದ್ದರು. ಆದ್ದರಿಂದಲೇ ವಿಶಿಷ್ಟ ರೀತಿಯ ಕಲೆ ಮತ್ತು ಇತಿಹಾಸವನ್ನು ಹೊದ್ದು ನಿಂತಿರುವ ವಾಸ್ತುಶಿಲ್ಪಗಳು ಅಂದಿನ ಕರಕುಶಲಕರ್ಮಿಗಳ ಉಡುಗೊರೆಯೇ ಸರಿ. ಕಾಲಾನಂತರದಲ್ಲಾದ ಬ್ರಿಟಿಷರ ದಾಳಿಯೇ ಮಹಾವಿದ್ಯೆ ನಮ್ಮ ಕೈತಪ್ಪಿ ಹೋಗುವಂತೆ ಮಾಡಿದ್ದು ಎಂದರೆ ತಪ್ಪಾಗಲಾರದು.
1924ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಇದರ ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತಾರೆ. ಬರೊಬ್ಬರಿ 96 ವರ್ಷಗಳೇ ಸಂದರೂ ಆ ಡ್ಯಾಮ್ ಇಂದಿಗೂ ಬಲಿಷ್ಠವಾಗಿದೆ. ಇದರ ವಿಶೇಷತೆ ಏನೆಂದರೆ ಒಂದು ಹಿಡಿ ಸಿಮೆಂಟ್ ಅನ್ನು ಬಳಸದೇ, ಮೊಟ್ಟೆ, ಸೆಗಣಿ, ಇಟ್ಟಿಗೆ ಹುಡಿ ಇತ್ಯಾದಿಗಳನ್ನು ಬಳಸಿ ಇದರ ನಿರ್ಮಾಣವಾಗಿದೆ ಎಂಬುದು.
Related Articles
Advertisement
ಲೇಪಾಕ್ಷಿ ದೇವಾಲಯಆಂಧ್ರಪ್ರದೇಶದಲ್ಲಿರುವ ಈ ದೇವಲಯಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಗುಡ್ಡದ ಮೇಲೆ ಹಾಸಿರುವ ಕಲ್ಲನ್ನು ಸಮತಟ್ಟು ಕೂಡ ಮಾಡದೆ ಹೇಗಿದೆಯೋ ಹಾಗೆ ಅದರ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ. ನಿರ್ಮಾಣದ ಹಂತದಲ್ಲಿ ಒಂದೆ ಒಂದು ಮೊಳೆ, ಸಿಮೆಂಟ್ ಅಥವಾ ಯಾವುದೇ ಸಾಧನವನ್ನು ಆಧಾರಕ್ಕಾಗಿ ಬಳಸಲಾಗಿಲ್ಲ. ಕೇವಲ ಕಲ್ಲಿನ ಜೋಡಣೆಯಲ್ಲೇ ದೇವಾಲಯದ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೆ ಈ ದೇವಾಲಯದ ನಡುವಿನಲ್ಲಿ ಇರುವ ಒಂದು ಕಂಬ ಯಾವುದೇ ಆಧರವಿಲ್ಲದೆ ನೇತಾಡುವಂತೆ ರಚನೆಗೊಂಡಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಬ್ರಿಟಿಷರ ಕಾಲದಲ್ಲಿ ಇದರ ಹಿಂದಿನ ವೈಜ್ಞಾನಿಕತೆಯನ್ನು ಅರಿಯುವ ಉದ್ದೇಶದಿಂದ ಕಂಬವನ್ನು ಸರಿಸಲು ಪ್ರಯತ್ನಿಸಿದಾಗ ಮೇಲ್ಚಾವಡಿಯಲ್ಲಿ ವಯತ್ಯಾಸಗಳು ಉಂಟಗುವುದರ ಜತೆಗೆ ಕಂಬದ ಒಂದು ಮೂಲೆ ನೆಲ ಸ್ಪರ್ಶವಾಯಿತೆ ಹೊರತು ವೈಜ್ಞಾನಿಕ ಮರ್ಮವನ್ನು ಅರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.
ಎಲ್ಲೋರದಲ್ಲಿ ಇರುವ ಈ ಗುಹಾ ದೇವಾಲಯವನ್ನು ಏಕಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ದೇವಾಲಯದ ಸುತ್ತಲಿನ ವರಾಂಡದಲ್ಲಿರುವ ಪ್ರತೀ ಕಂಬದಲ್ಲಿಯೂ ವಿಶೇಷ ವಿನ್ಯಾಸದ ಶಿಲ್ಪಕಲೆಗಳಿದ್ದು, ಪ್ರತಿಯೊಂದು ಕಂಬವೂ ಇತಿಹಾಸವನ್ನು ಸಾರುತ್ತದೆ. ರಥದ ಆಕೃತಿಯಲ್ಲಿ ಇದರ ಕೆತ್ತನೆಯಾಗಿದೆ. ದೊಡ್ಡ ಒಂದು ಬಂಡೆಕಲ್ಲಿನಲ್ಲಿ ಸುಂದರವಾದ ದೇವಾಲಯವನ್ನು ಕಾಣಬಲ್ಲ ಸಾಮರ್ಥ್ಯ ಅಂದಿನ ಎಂಜಿನಿಯರ್‌ಗಳಿಗೆ ಇತ್ತು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಮಹಾರಾಷ್ಟ್ರದಲ್ಲಿರುವ ಈ ಕೋಟೆ ಶಿವಾಜಿಯ ಕಾಲದ್ದು. ಅವರ ಕಾಲದಲ್ಲಿ ಅನೇಕ ಕೋಟೆಗಳ ನಿರ್ಮಾಣವಾಗಿದ್ದರು. ಈ ಕೋಟೆ ವಿಶೇಷ ಸ್ಥಾನವನ್ನು ಪಡೆದಿದೆ ಯಾಕೆಂದರೆ ಈ ಕೋಟೆ ಇರುವುದು ಸಮುದ್ರದ ಮಧ್ಯದಲ್ಲಿ. ಸುಮಾರು 400 ವರ್ಷ ಹಳೆಯದಾದ ಈ ಕೋಟೆಯನ್ನು ತಲುಪಲಿರುವುದು ಸಮುದ್ರ ಮಾರ್ಗ ಮಾತ್ರ. ಈ ಕೊಟೆಯ ಮುಖ್ಯದ್ವಾರವನ್ನು ಕಂಡು ಹಿಡಿಯುವುದು ಸುಲಭದ ಮಾತಲ್ಲ. ಅಕಸ್ಮಾತ್ ಪೂರ್ತಿ ಕೋಟೆಯನ್ನು ಸುತ್ತಿ ಬಂದಮೇಲೆ ದ್ವಾರದ ಅರಿವಾದರೂ ಒಳಗೆ ಹೋಗುವಾಗ ಆ ಮಾರ್ಗ ನೇರವಾಗಿಲ್ಲ. ನೆಲದ ಮೇಲೆ ಕೋಟೆ ಕಟ್ಟುವುದು ಸಾಮಾನ್ಯ ಅದರೆ ಇದು ನಿರ್ಮಾಣವಾಗಿರುವುದು ಸಮುದ್ರದ ನೀರಿನ ಮೇಲೆ. ಇದರ ನಿರ್ಮಾಣಕ್ಕೆ ಸುಮಾರು 75,000 ಕೆ.ಜಿ. ಕಬ್ಬಿಣವನ್ನು ಬಳಸಲಾಗಿದೆ ಮತ್ತು ಮೂರು ವರ್ಷದ ಕಾಲಾವಧಿಯಲ್ಲಿ ಇದನ್ನು ಸಂಪೂರ್ಣಗೊಳಿಸಿರುವುದು ಅವರ ಹೆಗ್ಗಳಿಕೆ. ಇಷ್ಟೇ ಅಲ್ಲದೆ ಸಮುದ್ರ ಮಧ್ಯದಲ್ಲಿ ನಿರ್ಮಾಣಗೊಂಡ ಕೋಟೆಯ ಒಳಗೆ ಮೂರು ಸಿಹಿನೀರಿನ ಬಾವಿ ಕೂಡ ಇದೆ. ಇವೆಲ್ಲ ಅಚ್ಚರಿಯ ಸಂಗತಿಗಳಲ್ಲವೇ? 17ನೇ ಶತಮಾನದ ಸುಮಾರಿಗೆ ನಿರ್ಮಾಣಗೊಂಡು ಇಂದಿಗೂ ಅಷ್ಟೇ ಸುದೃಢವಾಗಿರುವ ಇದು ಭಾರತೀಯ ವಾಸ್ತುಶಿಲ್ಪದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.
ಇಲ್ಲಿನ ಕಬ್ಬಿಣದ ಸ್ತಂಬ ಇಂದಿಗೂ ಅಂದಿನಂತೆ ಇದೆ. ಸಾವಿರಾರು ವರ್ಷಗಳಿಂದ ಗಾಳಿ ಮಳೆ ಬಿಸಿಲನ್ನು ಲೆಕ್ಕಿಸದೇ, ತುಕ್ಕು ಹಿಡಿಯದೇ ಉಳಿದಿರುವುದು ಮತ್ತೂಂದು ಅಚ್ಚರಿಯ ಸಂಗತಿ. ಅದೇ ರೀತಿ ಕರಾವಳಿಯಲ್ಲಿರುವ ಸಾವಿರ ಕಂಬದ ಬಸದಿ.ಇದು ಅಂದಿನ ವಾಸ್ತುಶಿಲ್ಪದ ಸಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.